ನವದೆಹಲಿ: ದೇಶದ ಸಾಮಾನ್ಯ ವರ್ಗದ ಜನರಲ್ಲಿ ಶೇ 66ರಷ್ಟು ಮಂದಿ ಸುಧಾರಿತ ಮತ್ತು ಪ್ರತ್ಯೇಕ ಶೌಚಾಲಯದಂತಹ ನೈರ್ಮಲ್ಯ ವ್ಯವಸ್ಥೆಗಳ ಸೌಲಭ್ಯಗಳನ್ನು ಹೊಂದಿದ್ದರೆ, ಪರಿಶಿಷ್ಟ ಪಂಗಡದವರಲ್ಲಿ ಶೇ 25.9ರಷ್ಟು ಮಂದಿಗೆ ಮಾತ್ರ ಈ ಸೌಲಭ್ಯಗಳನ್ನು ಹೊಂದಿದ್ದಾರೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ.

ಭಾರತದ ವಿವಿಧ ವರ್ಗಗಳಲ್ಲಿರುವ ಆರೋಗ್ಯ–ನೈರ್ಮಲ್ಯ ಅಸಮಾನತೆ ಕುರಿತು ಆಕ್ಸ್ಫಾಮ್ ಸಂಸ್ಥೆ ಅಧ್ಯಯನ ನಡೆಸಿ ಸಿದ್ಧಪಡಿಸಿರುವ ‘ದಿ ಇಂಡಿಯಾ ಇನ್ಈಕ್ವಾಲಿಟಿ ರಿಪೋರ್ಟ್– 2021‘ ವರದಿಯಲ್ಲಿ ಇಂಥ ಹಲವು ಮಾಹಿತಿಗಳಿವೆ.

ವರದಿಯಲ್ಲಿ ಉಲ್ಲೇಖಿಸಿರುವಂತೆ, ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡದ (ಎಸ್ಟಿ) ಶೇ 50ರಷ್ಟು ಜನರಿಗೆ ಕೋವಿಡೇತರ ವೈದ್ಯಕೀಯ ಸೌಲಭ್ಯಗಳು ಸಿಗುವುದು ಕಷ್ಟವಾಗಿದೆ. ಆದರೆ, ಸಾಮಾನ್ಯ ವರ್ಗದವರಲ್ಲಿ ಶೇ 18.2 ಮಂದಿಗೆ ಮಾತ್ರಇಂಥ ಸೌಲಭ್ಯಗಳಿಗಾಗಿ ಕಷ್ಟಪಡುತ್ತಿದ್ದಾರೆ‘.

ಸಾಮಾನ್ಯ ವರ್ಗದ ಜನರಿಗಿಂತ, ಪರಿಶಿಷ್ಟ ಪಂಗಡದವರ ಮನೆಗಳಲ್ಲಿ ಶೇ 12.6 ರಷ್ಟು ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದೆ ಎಂಬ ಅಂಶವೂ ವರದಿಯಲ್ಲಿದೆ. ಈ ವರದಿಯ ವಿಶ್ಲೇಷಣೆ ಪ್ರಕಾರ, ಕೋವಿಡ್ ಸಾಂಕ್ರಾಮಿಕವು, ದೇಶದಲ್ಲಿ ಹಿಂದೆ ಇದ್ದ ಅಸಮಾನತೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

ವೈದ್ಯಕೀಯ ಸೌಲಭ್ಯಗಳನ್ನು ಪಡೆಯುವ ವಿಷಯದಲ್ಲಿ ಮುಸ್ಲಿಂ ಕುಟುಂಬಗಳಿಗಿಂತ ಹಿಂದೂ ಸಮುದಾಯದ ಕುಟುಂಬಗಳು ಮುಂದಿವೆ. ಹಾಗೆಯೇ,ಮಕ್ಕಳ ಸಮಗ್ರ ಅಭಿವೃದ್ಧಿ ಸೇವೆ(ಐಸಿಡಿಎಸ್) ಯೋಜನೆಯಡಿಯಲ್ಲಿ, ಹಿಂದೂ ಕುಟುಂಬಗಳಿಗಿಂತ ಮುಸ್ಲಿಂ ಕುಟುಂಬಗಳು ಶೇಕಡಾ 10 ರಷ್ಟು ಕಡಿಮೆ ಪ್ರಮಾಣದಲ್ಲಿ ಪೂರಕ ಆಹಾರವನ್ನು ಪಡೆಯುತ್ತಿದ್ದಾರೆ‘ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.