ಹೈದರಾಬಾದ್: ಬಿಜೆಪಿಯನ್ನು ಕಟ್ಟಿಹಾಕುವ ಸಾಮರ್ಥ್ಯ ಕೆಸಿಆರ್, ಮಮತಾ ಬ್ಯಾನರ್ಜಿ, ಕೇಜ್ರಿವಾಲ್‌ರಂತಹ ಪ್ರಾದೇಶಿಕ ನಾಯಕರಿಗಿದೆಯೇ ವಿನಃ, ಕಾಂಗ್ರೆಸ್‌ಗಲ್ಲ ಎಂದು ಬಿಆರ್‌ಎಸ್ ಪಕ್ಷದ ನಾಯಕ ಕೆ.ಟಿ.ರಾಮರಾವ್ ಹೇಳಿದರು.

ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯನ್ನು ತಡೆಯುವಷ್ಟು ಸಾಮರ್ಥ್ಯ ಕಾಂಗ್ರೆಸ್‌ಗಿಲ್ಲ ಎಂದರು.

‘ಬಿಜೆಪಿಯನ್ನು ತಡೆಯುವ ಸಾಮರ್ಥ್ಯ ಇರುವ ನಾಯಕರು ಯಾರಾದರೂ ಇದ್ದರೆ ಅದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತ್ರ. ಇಂದು ದೇಶದೆಲ್ಲಡೆ ಬಿಜೆಪಿಗೆ ತಲೆನೋವಾಗಿರುವುದು ಪ್ರಾದೇಶಿಕ ಪಕ್ಷಗಳೆ’ ಎಂದರು.

‘ಒಂದು ಕಡೆ ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚೌಕಿದಾರ್ ಚೋರ್ ಹೈ ಎಂದು ಕರೆದರೆ, ಇನ್ನೊಂದೆಡೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಮೋದಿ ಅವರನ್ನು ಅಣ್ಣ ಎಂದು ಬಣ್ಣಿಸುತ್ತಾರೆ’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆದಿದರು.

‘ಬಿಆರ್‌ಎಸ್ ಪಕ್ಷ ಬಿಜೆಪಿಯ ‘ಬಿ’ ಟೀಮ್ ಎಂಬ ಸುಳ್ಳನ್ನು ಹರಡುವ ಮೂಲಕ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಿಆರ್‌ಎಸ್ ಪಕ್ಷವನ್ನು ಸೋಲಿಸಿತ್ತು. ಆದರೆ ಬಿಆರ್‌ಎಸ್‌ನ ಭದ್ರಕೋಟೆಯಾಗಿರುವ ಹೈದರಾಬಾದ್‌ನಲ್ಲಿ ಇಂತಹ ತಂತ್ರಗಳು ನಡೆಯುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.