ನವದೆಹಲಿ: ‘ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷಗಳ ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡುವ ಯಾವುದೇ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇರಲಿಲ್ಲ. ಆದರೆ ಕೆಲ ಸಂಸದರು ಅಮಾನತುಗೊಂಡ ನಂತರ ಉಳಿದವರು ತಮ್ಮನ್ನೂ ಅಮಾನತು ಮಾಡುವಂತೆ ಕೋರಿಕೆ ಸಲ್ಲಿಸಿದರು. ಇವರ ನಡೆ ಚಳಿಗಾಲದ ಅಧಿನವೇಶವನ್ನೇ ಹಾಳು ಮಾಡಿತು’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆ ಪಡೆದ ಮೂರು ನೂತನ ಅಪರಾಧ ಕಾಯ್ದೆಗಳಲ್ಲಿ ಲೋಪವಿದ್ದಲ್ಲಿ ವಿರೋಧ ಪಕ್ಷಗಳ ಸದಸ್ಯರಿಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ಇದೆ. ಸಹಕಾರ ನೀಡುವಂತೆ ಸಂಸದರನ್ನು ಹಲವು ಬಾರಿ ಕೋರಿದೆವು. ಆದರೆ ಕೆಲವರನ್ನು ಅಶಿಸ್ತಿನ ಕಾರಣ ಅಮಾನತು ಮಾಡಿದ ನಂತರ ವಿಪಕ್ಷಗಳ ಇತರ ಸಂಸದರು ತಮ್ಮನ್ನೂ ಅಮಾನತು ಮಾಡುವಂತೆ ಕೋರಿಕೊಂಡರು. ಇದು ಕಾಂಗ್ರೆಸ್ನ ಕುಸಿದ ಮಟ್ಟವನ್ನು ತೋರಿಸುತ್ತದೆ’ ಎಂದಿದ್ದಾರೆ.
.ಕಲಾಪಕ್ಕೆ ಅಡ್ಡಿ: ಡಿ.ಕೆ ಸುರೇಶ್ ಸೇರಿದಂತೆ ಮೂವರು ಕಾಂಗ್ರೆಸ್ ಸಂಸದರ ಅಮಾನತು.1989ರಲ್ಲಿ ಕಾಂಗ್ರೆಸ್ 63 ಸಂಸದರನ್ನು ಅಮಾನತು ಮಾಡಿತ್ತು: ಸಂಸದ ಅಹ್ಲುವಾಲಿಯಾ.
‘ಸದನದೊಳಗೆ ಘೋಷಣಾ ಫಲಕಗಳನ್ನು ಹಿಡಿದು ಬಾರದಂತೆ, ತಂದರೆ ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ವಿಪಕ್ಷಗಳ ಸಂಸದರಿಗೆ ಸೂಚಿಸಿದ್ದರು. ಆದರೆ ಅಮಾನತು ಆಗಬೇಕು ಎಂದು ಬಯಸಿ ಫಲಕಗಳನ್ನು ತರುತ್ತಿದ್ದೇವೆ ಎಂದು ವಿಪಕ್ಷಗಳ ಸಂಸದರು ಹೇಳಿದರು’ ಎಂದು ಜೋಶಿ ಹೇಳಿದರು.

ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯ 100 ಹಾಗೂ ರಾಜ್ಯಸಭೆಯಿಂದ 46 ಸಂಸದರು ಸೇರಿ ಒಟ್ಟು 146 ಸಂಸದರು ಅಮಾನತುಗೊಂಡಿದ್ದಾರೆ.

‘17ನೇ ಲೋಕಸಭೆಯ ಐತಿಹಾಸಿಕ ಕ್ಷಣಗಳಲ್ಲಿ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದು ಮೂಲಕ ಆರಂಭಗೊಂಡು, ಬ್ರಿಟಿಷ್ ಕಾಲದ ಅಪರಾಧ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆ ಮೂಲಕ ಅಂತ್ಯಗೊಂಡಂತಾಗಿದೆ’ ಎಂದು ಜೋಶಿ ತಿಳಿಸಿದ್ದಾರೆ.

‘ಕಾಂಗ್ರೆಸ್ ಪಕ್ಷವು ಆಡಳಿತದಲ್ಲಿದ್ದಾಗ ಜವಾಬ್ದಾರಿಯುತವಾಗಿರಲಿಲ್ಲ. ಆದರೆ ವಿರೋಧಪಕ್ಷದಲ್ಲಿರುವಾಗ ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದೆ’ ಎಂದು ಜೋಶಿ ಆರೋಪಿಸಿದ್ದಾರೆ.
.ಸಂಸದರ ಅಮಾನತು ಬಗ್ಗೆ ಏಕೆ ಚರ್ಚೆ ನಡೆಸುತ್ತಿಲ್ಲ? ರಾಹುಲ್ ಗಾಂಧಿ.ಸಂಸದರ ಅಮಾನತು: ಉಪರಾಷ್ಟ್ರಪತಿ ಅಣಕಿಸಿದ ವಿರೋಧಪಕ್ಷಗಳ ಸಂಸದರು; ಬಿಜೆಪಿ ಕಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.