ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಕ್ಫ್‌ ಸಮಿತಿ ಸಭೆ: ವಿರೋಧ ಪಕ್ಷಗಳ ಸಂಸದರಿಂದ ಬಹಿಷ್ಕಾರ

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೇಲೆ ಆರೋಪಕ್ಕೆ ತೀವ್ರ ಆಕ್ಷೇಪ–ಮಾತಿನ ಚಕಮಕಿ
Published : 14 ಅಕ್ಟೋಬರ್ 2024, 23:30 IST
Last Updated : 14 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments
ಜಂಟಿ ಸದನ ಸಮಿತಿಯಲ್ಲಿ ವಕ್ಫ್‌ ಆಸ್ತಿ ಕಬಳಿಕೆಯ ಉಲ್ಲೇಖ ಅನ್ವರ್‌ ಮಾಣಿಪ್ಪಾಡಿ ಆರೋಪಕ್ಕೆ ವಿರೋಧ ಪಕ್ಷದ ಸಂಸದರ ಆಕ್ಷೇಪ ಸಭೆ ಬಹಿಷ್ಕಾರ; ಸ್ಪೀಕರ್‌ಗೆ ಪತ್ರ ಬರೆಯಲು ನಿರ್ಧಾರ
ಹಿಂದೂ ಸಂಘಟನೆಗಳ ಆಹ್ವಾನಕ್ಕೆ ವಿರೋಧ
ಸಮಿತಿ ಸಭೆಗೆ ಹಿಂದೂ ಸಂಘಟನೆಯ ಮುಖಂಡರನ್ನು ಆಹ್ವಾನಿಸಿದ್ದಕ್ಕೆ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ದಾಖಲಿಸಿದರು. ವಕ್ಫ್‌ (ತಿದ್ದುಪಡಿ) ಮಸೂದೆಯು ಮುಸ್ಲಿಮರಿಗೆ ಸಂಬಂಧಿಸಿದ್ದು ಹಿಂದೂ ಸಂಘಟನೆಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಲು ಮುಂದಾದ ವೇಳೆ ಆಕ್ಷೇಪ ವ್ಯಕ್ತಪಡಿಸಿದರು. ‘ವಕ್ಫ್‌ ಕಾಯ್ದೆಯಿಂದ ಮುಸ್ಲಿಂಯೇತರ ದೇವಸ್ಥಾನ ಸೇರಿದಂತೆ ಇತರೆ ಆಸ್ತಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯ ದಾಖಲಿಸಲು ಸಂಘಟನೆ ಹಾಗೂ ಮುಖಂಡರು ಭಾಗವಹಿಸಿದ್ದಾರೆ. ಅವರು ಅಭಿಪ್ರಾಯ ದಾಖಲಿಸಿದ ಬಳಿಕ ಸಮಿತಿಯು ವಿಸ್ತೃತ ಸಮಾಲೋಚನೆ ನಡೆಸಬಹುದು’ ಬಿಜೆಪಿ ಸಂಸದರು ತಿಳಿಸಿದರು. ‘ಮೂಲಭೂತ ಸಿದ್ದಾಂತ ಹೊಂದಿರುವ ಸನಾತನ ಸಂಸ್ಥೆ ಹಿಂದೂ ಜನಜಾಗೃತಿ ಸಂಸ್ಥೆಯು ‘ಹಿಂದೂರಾಷ್ಟ್ರ‘ ನಿರ್ಮಾಣ ಮಾಡುವ ಗುರಿ ಹೊಂದಿದ್ದು ದೇಶದಲ್ಲಿ ಹಿಂಸಾಚಾರದಲ್ಲಿ ತೊಡಗಿದೆ. ಇಂತಹವರಿಗೆ ಆಹ್ವಾನ ನೀಡಿದ್ದು ಸರಿಯಲ್ಲ’ ಎಂದು ಸಮಿತಿ ಅಧ್ಯಕ್ಷ ಪಾಲ್‌ ಅವರಿಗೆ ಪತ್ರ ಬರೆದಲ್ಲಿ ಒವೈಸಿ ಆರೋಪ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಕೀಲರಾದ ವಿಷ್ಣುಶಂಕರ್‌ ಜೈನ್‌ ಅಶ್ವಿನಿ ಉಪಾಧ್ಯಾಯ್‌ ಮಹಾರಾಷ್ಟ್ರದ ನಾಸಿಕ್‌ನ ಕಾಲಾರಾಮ್ ದೇಗುಲದ ಮಹಾಂತ ಸುಧೀರ್‌ದಾಸ್‌ ಮಹಾರಾಜ್‌ ಅವರನ್ನು ಸಭೆಗೆ ಕರೆದಿದ್ದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ಜಮೀಯತ್‌ ಉಲೇಮಾ–ಎ– ಹಿಂದ್‌ನ ಮಹಮ್ಮದ್‌ ಮದನಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಉದ್ದೇಶಿತ ವಕ್ಫ್‌(ತಿದ್ದುಪಡಿ) ಮಸೂದೆಗೆ ಸಂಘಟನೆಯು ಬಲವಾಗಿ ವಿರೋಧಿಸುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT