ನವದೆಹಲಿ: ಈ ವರ್ಷದ ವಿವಾದಿತ ವೈದ್ಯಕೀಯ 'ನೀಟ್–ಯುಜಿ' ಪರೀಕ್ಷೆಯ ಕೇಂದ್ರವಾರು ಫಲಿತಾಂಶಗಳ ಪ್ರಕಾರ, 11 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಶೂನ್ಯ ಅಥವಾ ನೆಗೆಟಿವ್ ಅಂಕಗಳನ್ನು ಗಳಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ತಿಳಿಸಿದೆ.

ಬಿಹಾರದ ಕೇಂದ್ರವೊಂದರಲ್ಲಿ ಅಭ್ಯರ್ಥಿವೊಬ್ಬರು ಅತಿ ಕಡಿಮೆ ಅಂಕ (ನೆಗೆಟಿವ್ 180) ಗಳಿಸಿದ್ದಾರೆ.

ಈ ವರ್ಷದ 'ನೀಟ್–ಯುಜಿ' ಪರೀಕ್ಷೆಯ ಕೇಂದ್ರ ಮತ್ತು ನಗರವಾರು ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಪ್ರಕಟಗೊಳಿಸಿತ್ತು.

ಇದರ ಪ್ರಕಾರ, 2,250ಕ್ಕೂ ಅಧಿಕ ಅಭ್ಯರ್ಥಿಗಳು ಶೂನ್ಯ ಅಂಕ ಮತ್ತು 9,400ಕ್ಕೂ ಹೆಚ್ಚು ಅಭ್ಯರ್ಥಿಗಳು ನೆಗೆಟಿವ್ ಅಂಕಗಳನ್ನು ಗಳಿಸಿದ್ದಾರೆ.

ನೀಟ್–ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದದ ಕೇಂದ್ರ ಬಿಂದು ಆಗಿರುವ ಜಾರ್ಖಂಡ್‌ನ ಹಜಾರೀಬಾಗ್‌ನಲ್ಲಿ, ಹಲವಾರು ಅಭ್ಯರ್ಥಿಗಳು ಶೂನ್ಯಕ್ಕಿಂತ ಕಡಿಮೆ ಅಂಕ ಗಳಿಸಿದ್ದಾರೆ.

'ನೀಟ್–ಯುಜಿ' ಪರೀಕ್ಷೆಯನ್ನು ರದ್ದುಪಡಿಸಬೇಕು, ಮರು ಪರೀಕ್ಷೆ ನಡೆಸಬೇಕು ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 22ರಂದು ಪುನರಾರಂಭಿಸಲಿದೆ.

ಸೋಮವಾರದಿಂದ ಆರಂಭವಾಗಲಿರುವ ಸಂಸತ್‌ನ ಬಜೆಟ್ ಅಧಿವೇಶನದಲ್ಲೂ ಈ ಕುರಿತು ವಿಷಯಗಳನ್ನು ಪ್ರಸ್ತಾಪಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ಹಾಗಾಗಿ ಕಾವೇರಿದ ಚರ್ಚೆ, ಕೋಲಾಹಲಕ್ಕೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆಗಳಿವೆ.
.ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ 149 ಅಭ್ಯರ್ಥಿಗಳಿಗೆ 700ಕ್ಕಿಂತ ಹೆಚ್ಚು ಅಂಕ .ಚರ್ಚೆ | ನೀಟ್ ಇರಬೇಕೇ? ಬೇಡವೇ?: ಎರಡು ಹಂತದ ಪರೀಕ್ಷಾ ವ್ಯವಸ್ಥೆ ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.