ನವದೆಹಲಿ:ಏಳು ಜನ ಹಾಲಿ ಸಂಸದರು ಹಾಗೂ 199 ಶಾಸಕರು ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವಾಗ ಪಾನ್ ಕಾರ್ಡ್ ವಿವರಗಳನ್ನು ನೀಡಿಲ್ಲ ಎಂದು ಎಡಿಆರ್ ಸಂಸ್ಥೆಯ ವರದಿ ತಿಳಿಸಿದೆ.

ಅಸೋಸಿಯೇಶನ್ ಫಾರ್ ಡೆಮಕ್ರೆಟಿಕ್ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ಸಂಸ್ಥೆಗಳು ನಡೆಸಿದ ಸಮೀಕ್ಷೆಯಿಂದಈ ಅಂಶ ಬೆಳಕಿಗೆ ಬಂದಿದೆ. 542 ಲೋಕಸಭಾ ಸದಸ್ಯರು ಮತ್ತು 4086 ಶಾಸಕರು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ನಾಮಪತ್ರ ದಾಖಲೆಗಳಲ್ಲಿ ಪಾನ್ ಕಾರ್ಡ್ ವಿವರಗಳನ್ನು ಸಲ್ಲಿಸಿದ್ದಾರೋ, ಇಲ್ಲವೋಎಂಬುದನ್ನುಪರಿಶೀಲಿಸಿಈ ಎರಡು ಸಂಸ್ಥೆಗಳು ವರದಿ ನೀಡಿವೆ.

ಕಾಂಗ್ರೆಸ್ ಪಕ್ಷದ 51 ಶಾಸಕರು, ಬಿಜೆಪಿಯ 42 ಶಾಸಕರು ಮತ್ತು ಸಿಪಿಐ(ಎಂ)ನ 25 ಶಾಸಕರು ಇಲ್ಲಿಯವರೆಗೂ ಪಾನ್ ಕಾರ್ಡ್ ಮಾಹಿತಿ ನೀಡಿಲ್ಲ. ರಾಜ್ಯವಾರುಪಟ್ಟಿಯಲ್ಲಿ ಕೇರಳದ 33 ಶಾಸಕರು, ಮಿಜೋರಾಂನ 28 ಶಾಸಕರು ಮತ್ತು ಮಧ್ಯಪ್ರದೇಶದ 19 ಶಾಸಕರು ಪಾನ್ ಕಾರ್ಡ್ ಮಾಹಿತಿ ಕೊಟ್ಟಿಲ್ಲ ಎಂದು ಎಡಿಆರ್ ಸಂಸ್ಥೆತಿಳಿಸಿದೆ.

ಕುತೂಹಲಕಾರಿ ಸಂಗತಿ ಎಂದರೆ 40 ವಿಧಾನಸಭಾ ಸ್ಥಾನಗಳಿರುವ ಮಿಜೋರಾಂರಾಜ್ಯದಲ್ಲಿ 28 ಶಾಸಕರು ಪಾನ್ ಕಾರ್ಡ್ ಮಾಹಿತಿ ನೀಡಿಲ್ಲ!

ಬಿಜೆಡಿ ಮತ್ತು ಎಐಎಡಿಎಂಕೆ ಪಕ್ಷದ ತಲಾ ಇಬ್ಬರು ಸಂಸದರು, ಕಾಂಗ್ರೆಸ್, ಎನ್ಸಿಪಿ ಮತ್ತು ಎಐಡಿಎಫ್ನ ತಲಾ ಒಬ್ಬರು ಸಂಸದರು ಈ ತನಕ ಪಾನ್ ಕಾರ್ಡ್ ಮಾಹಿತಿ ಸಲ್ಲಿಸಿಲ್ಲ. ಮರು ಆಯ್ಕೆಯಾಗಿರುವ ಹೆಚ್ಚಿನ ಶಾಸಕರೇ ಪಾನ್ ಕಾರ್ಡ್ ಮಾಹಿತಿ ನೀಡಿಲ್ಲ ಎಂಬುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.