ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ದ್ವಿಪಕ್ಷೀಯ ಮಾತುಕತೆಗಾಗಿ ತಮಿಳುನಾಡಿನ ಮಾಮಲ್ಲಪುರಂಗೆ ಬರುವುದಕ್ಕೂ ಮುನ್ನ ಶುಕ್ರವಾರ ಟ್ವಿಟರ್ನಲ್ಲಿ#GoBackModi ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿತ್ತು. ಇದರ ಹಿಂದೆ ಪಾಕಿಸ್ತಾನೀಯರು ಇದ್ದುದು ಎಂಬುದು ಬಯಲಾಗಿದೆ.

ಪಾಕಿಸ್ತಾನದ ಅನೇಕ ಟ್ವಿಟರ್ ಹ್ಯಾಂಡಲ್ಗಳಿಂದ#GoBackModiಹ್ಯಾಶ್ಟ್ಯಾಗ್ನೊಂದಿಗೆ ಟ್ವೀಟ್ ಮಾಡಲಾಗಿತ್ತು. ಉದಾಹರಣೆಗೆ, ಮುಝಮ್ಮಿಲ್ ಅಸ್ಲಾಂ ಎಂಬ ಟ್ವಿಟರ್ ಹ್ಯಾಂಡಲ್ನಿಂದ, ‘#GoBackModi ಫೇಸ್ಬುಕ್ನಲ್ಲಿ ಟ್ರೆಂಡಿಂಗ್ ಆಗಿದೆ. ನಾವೂ ಕೈಜೋಡಿಸೋಣ ಮತ್ತು ಇಮ್ರಾನ್ ಖಾನ್ ಅವರನ್ನು ಅಭಿನಂದಿಸೋಣ’ ಎಂದು ಟ್ವೀಟ್ ಮಾಡಲಾಗಿತ್ತು. ಈ ಟ್ವಿಟರ್ ಹ್ಯಾಂಡಲ್ನಲ್ಲಿ ‘ಎ ಪ್ಯಾಷನೇಟ್ ಪಾಕಿಸ್ತಾನಿ’ ಎಂದು ಉಲ್ಲೇಖಿಸಲಾಗಿದೆ. ಇದು ಪಾಕಿಸ್ತಾನದ ಕರಾಚಿಯದ್ದಾಗಿದೆ.

ಇದನ್ನೂ ಓದಿ:ಟ್ವಿಟರ್ನಲ್ಲಿ ನರೇಂದ್ರ ಮೋದಿ ಗೋಬ್ಯಾಕ್- ವೆಲ್ಕಮ್ ಸಂಘರ್ಷ

‘ತಮಿಳು ದೇಶದ ಬಗ್ಗೆ ಪಾಕಿಸ್ತಾನಕ್ಕೆ ಪ್ರೀತಿಯಿದೆ,ಗೋಬ್ಯಾಕ್ ಮೋದಿ’ ಎಂದು ಅಮ್ಮರ್ ಖಾಲೀದ್ ಎಂಬಾತ ಟ್ವೀಟ್ ಮಾಡಿದ್ದಾನೆ. ಆತನ ಟ್ವಿಟರ್ ಹ್ಯಾಂಡಲ್ನಲ್ಲಿ ಉಲ್ಲೇಖಿಸಿದ ಪ್ರಕಾರ ಆತನ ಊರು ಬಾಲಾಕೋಟ್.

ಇದೇ ರೀತಿ ಪಾಕಿಸ್ತಾನದ ಅನೇಕ ಟ್ವಿಟರ್ಹ್ಯಾಂಡಲ್ಗಳಿಂದ ಟ್ವೀಟ್ ಮಾಡಲಾಗಿದೆ. ಕೆಲವು ಟ್ವೀಟ್ಗಳು ಇಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.