ನವದೆಹಲಿ: ದೆಹಲಿಯ ಓಲ್ಡ್ ರಾಜಿಂದರ್ ನಗರ ಪ್ರದೇಶದಲ್ಲಿರುವ ಐಎಎಸ್ ತರಬೇತಿ ಕೇಂದ್ರಕ್ಕೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದು, ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
.ಅಧ್ಯಕ್ಷೀಯ ಚುನಾವಣೆ ರೇಸ್ನಿಂದ ಬೈಡನ್ ನಿರ್ಗಮನ ಡೆಮಾಕ್ರಟಿಕ್ ದಂಗೆ ಎಂದ ಟ್ರಂಪ್.ಸಿ.ಎಚ್. ವಿಜಯಶಂಕರ್ಗೆ ಒಲಿದ ಸ್ಥಾನ: ಅಂದು ಸಿಮೆಂಟ್ ವ್ಯಾಪಾರಿ, ಈಗ ರಾಜ್ಯಪಾಲ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್, ಸಂಸ್ಥೆಗಳ ಬೇಜವಾಬ್ದಾರಿತನದಿಂದಾಗಿ ಪ್ರತಿ ಹಂತದಲ್ಲೂ ಅಸುರಕ್ಷಿತ ನಿರ್ಮಾಣ, ಕಳಪೆ ನಗರ ಯೋಜನೆ ಪರಿಣಾಮ ಸಾಮಾನ್ಯರು, ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಒತ್ತಿ ಹೇಳಿದ್ದಾರೆ.

ಓಲ್ಡ್ ರಾಜಿಂದರ್ ನಗರ ಪ್ರದೇಶದ ಕಟ್ಟಡವೊಂದರ ನೆಲಮಾಳಿಗೆಯ ಐಎಎಸ್ ತರಬೇತಿ ಕೇಂದ್ರಕ್ಕೆ ನೀರು ನುಗ್ಗಿದ ಪರಿಣಾಮ ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರವಾಗಿದೆ. ಈ ಹಿಂದೆಯೂ ಮಳೆ ಸಂಬಂಧಿತ ಅವಘಡದಲ್ಲಿ ವಿದ್ಯಾರ್ಥಿ ಓರ್ವ ಪ್ರಾಣ ಕಳೆದುಕೊಂಡಿದ್ದರು ಎಂದು ಹೇಳಿದ್ದಾರೆ.
.ನೀತಿ ಆಯೋಗದ ಸಭೆಗೆ ನಿತೀಶ್ ಕುಮಾರ್ ಗೈರು: ‘ಇಂಡಿಯಾ’ ಬಣದ ಸಿಪಿಐ ಹೇಳಿದ್ದೇನು?.ದೆಹಲಿ | IAS ತರಬೇತಿ ಕೇಂದ್ರಕ್ಕೆ ನುಗ್ಗಿದ ನೀರು; ಮೂವರು ಸಾವು, ಮಾಲೀಕನ ಬಂಧನ.
ಸುರಕ್ಷಿತ, ಮೂಲಸೌಕರ್ಯಯುಕ್ತ, ಸುಭದ್ರ ಜೀವನವು ಪ್ರತಿಯೊಬ್ಬ ನಾಗರಿಕನ ಹಕ್ಕು ಹಾಗೂ ಇದನ್ನು ಸಮರ್ಪಕವಾಗಿ ಒದಗಿಸುವುದು ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ರಾಹುಲ್ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ತರಬೇತಿ ಕೇಂದ್ರದ ಮಾಲೀಕ ಮತ್ತು ಸಮನ್ವಯಕಾರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ‘ಪಿಟಿಐ’ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.