ನವದೆಹಲಿ: ಮುಂಬರುವ 2024ರ ಸಾರ್ವತ್ರಿಕ ಚುನಾವಣೆಯಲ್ಲೂ ದೇಶದ ಜನತೆಯಿಂದ ಬಿಜೆಪಿಗೆ ಸಂಪೂರ್ಣ ಬೆಂಬಲ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಬಿಜೆಪಿ ಸರ್ಕಾರವು ಅನೇಕ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸಿದೆ. ಭಾರತಕ್ಕೆ ಕುಟುಂಬ ರಾಜಕಾರಣ ಮತ್ತು ಸ್ವಜನಪಕ್ಷಪಾತವು ನಿಜವಾದ ತಡೆಗೋಡೆಗಳಾಗಿವೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ಬದಲಾವಣೆಯನ್ನು ತರುತ್ತಿದೆ. ನಮ್ಮ ಸರ್ಕಾರದ ಆಡಳಿತವನ್ನು ಜನರು ಅನುಭವಿಸಿ, ಪ್ರೋತ್ಸಾಹವನ್ನು ನೀಡುತ್ತಿದ್ದಾರೆ ಎಂದು ಮೋದಿ ಪ್ರತಿಪಾದಿಸಿದರು.

ಹಿಂದೂಸ್ತಾನ್ ಟೈಮ್ಸ್ ನೇತೃತ್ವದಲ್ಲಿ ನಡೆದ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಕಾರ್ಯಕ್ರಮದ ಪರಿಕಲ್ಪನೆ ‘ಬಿಯಾಂಡ್ ಬ್ಯಾರಿಯರ್ಸ್’ ಅನ್ನು ಉಲ್ಲೇಖಿಸುವ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಜನರು ‘ಎಲ್ಲಾ ಅಡೆತಡೆಗಳನ್ನು ಮೀರಿ’ ಆಡಳಿತಾರೂಢ ಬಿಜೆಪಿಯನ್ನು ಬೆಂಬಲಿಸುತ್ತಾರೆ ಹಾಗೂ ಚುನಾವಣೆ ಫಲಿತಾಂಶವು ಎಲ್ಲಾ ತೊಡಕುಗಳನ್ನು ನಿವಾರಿಸಲಿದೆ ಎಂದು ತಿಳಿಸಿದರು.

ಮಾಧ್ಯಮ ಸಂಸ್ಥೆಯ 2047ರ ಶೃಂಗಸಭೆಯ ಪರಿಕಲ್ಪನೆಯು ‘ಅಭಿವೃದ್ಧಿ ಹೊಂದಿದ ರಾಷ್ಟ್ರ; ಮುಂದೇನು’ ವಿಷಯ ಕುರಿತು ಮಾತನಾಡಿದ ಮೋದಿ, ಎಲ್ಲಾ ಅಡೆತಡೆಗಳನ್ನು ಮೀರಿ ಭಾರತವನ್ನು ಮರುರೂಪಿಸುವರೆಗಿನ ಪ್ರಯಾಣವು ಉಜ್ವಲ ಭವಿಷ್ಯಕ್ಕೆ ಅಡಿಪಾಯ ಹಾಕಿದೆ. ಈ ತಳಹದಿಯ ಮೇಲೆ ಅಭಿವೃದ್ಧಿ ಹೊಂದಿದ, ಭವ್ಯವಾದ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲಾಗುವುದು ಎಂದು ಅವರು ಪ್ರತಿಪಾದಿಸಿದರು.

ಕೇವಲ ಐದು ವರ್ಷಗಳಲ್ಲಿ 13 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ. ಭಾರತದ ಮಧ್ಯಮ ವರ್ಗವನ್ನು ಪ್ರೋತ್ಸಾಹಿಸುವುದು ಮತ್ತು ಬಡತನವನ್ನು ಕಡಿಮೆ ಮಾಡವುದು ಭಾರತದ ಬೃಹತ್ ಆರ್ಥಿಕತೆಯ ಆಧಾರವಾಗಿದೆ. ಮಧ್ಯಮ ವರ್ಗ ಮತ್ತು ಬಡವರ ಆಕಾಂಕ್ಷೆಗಳು ಮತ್ತು ಇಚ್ಫಾಶಕ್ತಿಯು ದೇಶದ ಅಭಿವೃದ್ಧಿಗೆ ಶಕ್ತಿಯನ್ನು ನೀಡುತ್ತಿದೆ. ಈ ಶಕ್ತಿಯು 10ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆಯನ್ನು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡಿದೆ ಎಂದು ಮೋದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.