ನವದೆಹಲಿ: ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ತಲುಪಿಸುವ ಭಾರತೀಯ ಅಂಚೆ ಪೇಮೆಂಟ್ಸ್ಬ್ಯಾಂಕ್ಗೆ (ಐಪಿಪಿಬಿ) ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿ ಚಾಲನೆ ನೀಡಿದರು.

‘ಬದಲಾವಣೆಗೆ ಹೊಂದಿಕೊಳ್ಳುವುದು ಅನಿವಾರ್ಯ. ಇ–ಮೇಲ್ ಬಳಕೆಗೆ ಬಂದಾಗ ಅಂಚೆ ಇಲಾಖೆಯ ಪ್ರಸ್ತುತತೆ ಬಗ್ಗೆ ಹಲವು ಪ್ರಶ್ನೆಗಳು ಮೂಡಿದ್ದವು. ತಂತ್ರಜ್ಞಾನ ಅಳವಡಿಕೆಯೊಂದಿಗೆಅಸ್ತಿತ್ವ ಕಾಯ್ದುಕೊಂಡು ಮುಂದುವರಿಯುವುದು ಹೇಗೆ ಎನ್ನುವುದನ್ನು ಅಂಚೆ ಪೇಮೆಂಟ್ಸ್ ಬ್ಯಾಂಕ್ ಮೂಲಕ ಸಾಬೀತುಪಡಿಸಿದ್ದೇವೆ’ ಎಂದು ಪ್ರಧಾನಿ ಹೇಳಿದರು.

‘ಉಳಿತಾಯ ಖಾತೆಯನ್ನು ತೆರೆಯುವುದಷ್ಟೇ ಅಲ್ಲದೆ, ಸಣ್ಣ ವರ್ತಕರು ತಮ್ಮ ಕೆಲಸ ಮಾಡಲು ಚಾಲ್ತಿ ಖಾತೆಯನ್ನೂ ತೆರೆಯಬಹುದು. ಬೆಂಗಳೂರು, ಮುಂಬೈನಲ್ಲಿ ಕೆಲಸ ಮಾಡುತ್ತಿರುವಉತ್ತರ ಪ್ರದೇಶ, ಮತ್ತು ಬಿಹಾರದವರು ತಮ್ಮ ಕುಟುಂಬಕ್ಕೆ ‘ಐಪಿಪಿಬಿ’ ಮೂಲಕವೇ ಹಣ ವರ್ಗಾವಣೆ ಮಾಡಬಹುದು.

‘ಅಂಚೆ ಸಿಬ್ಬಂದಿ ಪತ್ರ ತಲುಪಿಸುವುದಷ್ಟನ್ನೇ ಮಾಡುವುದಿಲ್ಲ. ಅನಕ್ಷರಸ್ಥರಿಗೆ ಪತ್ರದಲ್ಲಿರುವುದನ್ನು ಓದಿ ಹೇಳುವುದು, ಹೇಳಿದ್ದನ್ನು ಬರೆದು ಸಂಬಂಧ ಪಟ್ಟವರಿಗೆ ತಲುಪಿಸುವ ಮೂಲಕಗ್ರಾಮೀಣ ಭಾಗದ ಜನರ ಜತೆ ಅತ್ಯಂತ ಆತ್ಮೀಯ ಸಂಬಂಧ ಹೊಂದಿದ್ದಾರೆ. ಇಂತಹ ಸಿಬ್ಬಂದಿಯ ಕೈಗೆ ಡಿಜಿಟಲ್ ಸಾಧನೆ ನೀಡುತ್ತಿದ್ದೇವೆ.

‘ಅಂಚೆ ಸಿಬ್ಬಂದಿ ಬಳಿ ಸ್ಮಾರ್ಟ್ಫೋನ್ ಮತ್ತು ಬಯೊಮೆಟ್ರಿಕ್ ಸಾಧನ ಇರುತ್ತದೆ. ಗ್ರಾಹಕರ ಮನೆ ಬಾಗಿಲಿನಲ್ಲಿಯೇಆಧಾರ್ ಸಂಖ್ಯೆಯ ಮೂಲಕ ತಕ್ಷಣ ಕಾಗದರಹಿತ ಖಾತೆ ತೆರೆಯಲಾಗುತ್ತದೆ.ಹಣ ಜಮೆ ಮಾಡುವ, ಹಣ ಹಿಂದೆಪಡೆಯುವ ಮತ್ತು ವಿದ್ಯುತ್, ಫೋನ್ ಒಳಗೊಂಡು ವಿವಿಧ ನಾಗರಿಕ ಸೇವೆಗಳ ಬಿಲ್ಗಳನ್ನು ಪಾವತಿ ಮಾಡುವ ಅವಕಾಶವೂಲಭ್ಯವಾಗಲಿದೆ’ ಎಂದು ವಿವರಿಸಿದರು.

ಏನಿದು ಪೇಮೆಂಟ್ಸ್ ಬ್ಯಾಂಕ್:ವಲಸೆ ಕಾರ್ಮಿಕರು, ಕಡಿಮೆ ಆದಾಯದ ಕುಟುಂಬಗಳು, ಸಣ್ಣ ವ್ಯಾಪಾರಸ್ಥರು, ಇತರ ಅಸಂಘಟಿತ ವಲಯದವರು ಮುಂತಾದವರಿಗೆ ಸಣ್ಣ ಉಳಿತಾಯ ಖಾತೆ, ಹಣ ಪಾವತಿ ಮತ್ತು ವರ್ಗಾವಣೆ ಸೌಲಭ್ಯವನ್ನು ಸುಲಭವಾಗಿ ಒದಗಿಸುವುದೇ ಇದರ ಧ್ಯೇಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.