ನವದೆಹಲಿ: ಕೋವಿಡ್–19ವಿರುದ್ಧ ಹೋರಾಡುತ್ತಿರುವ ವೈದ್ಯರ ಶ್ರಮವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ವೈದ್ಯರು ತಮ್ಮನ್ನು ಅಪಾಯಕ್ಕೆ ಒಡ್ಡಿಕೊಂಡು ಇತರರ ಜೀವ ರಕ್ಷಿಸುತ್ತಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿ ನಿಂತು, ಅಸಾಮಾನ್ಯ ರೀತಿಯಲ್ಲಿ ಜನರ ಸೇವೆ ಮಾಡುತ್ತಿರುವ ವೈದ್ಯರನ್ನು ಭಾರತ ಗೌರವಿಸುತ್ತದೆ’ ಎಂದಿದ್ದಾರೆ.

ಡಾ.ಬಿ.ಸಿ.ರಾಯ್ ಅವರ ಜನ್ಮದಿನವಾದ ಜುಲೈ 1 ಅನ್ನು ವೈದ್ಯರ ದಿನವಾಗಿ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಮೋದಿ ಅವರು ವೈದ್ಯರ ಸೇವೆಯನ್ನು ಶ್ಲಾಘಿಸುವ ಕಿರು ವಿಡಿಯೊ ಸಂದೇಶ ಬಿಡುಗಡೆ ಮಾಡಿದ್ದಾರೆ.

ಬುಧವಾರ (ಜುಲೈ 1) ಲೆಕ್ಕ ಪರಿಶೋಧಕರ ದಿನವೂ ಆಗಿರುವುದರಿಂದ ಪ್ರಧಾನಿಯವರು ತಮ್ಮ ವಿಡಿಯೊದಲ್ಲಿ ಈ ಸಮುದಾಯದವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

‘ಆರೋಗ್ಯಕರ ಮತ್ತು ಪಾರದರ್ಶಕ ಆರ್ಥಿಕತೆಯನ್ನು ಖಾತರಿಪಡಿಸುವಲ್ಲಿ ಶ್ರಮಜೀವಿಗಳಾದ ಲೆಕ್ಕ ಪರಿಶೋಧಕರು ಮಹತ್ವದ ಪಾತ್ರ ವಹಿಸುತ್ತಾರೆ. ಸಮಾಜದ ಆರ್ಥಿಕ ಆರೋಗ್ಯ ಸರಿಯಾಗಿರುವಂತೆ ನೋಡಿಕೊಳ್ಳುವ ಹೊಣೆ ಈ ಸಮುದಾಯದ ಮೇಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.