ಮುಂಬೈ: ₹12 ಕೋಟಿ ಬೆಲೆ ಬಾಳುವ ಕಾರನ್ನು ಖರೀದಿಸಿರುವ ಪ್ರಧಾನಿ ನರೇಂದ್ರ ಮೋದಿ ಇನ್ನು ತಮ್ಮನ್ನು ತಾವೇ 'ಫಕೀರ' ಎಂದು ಸಂಬೋಧಿಸಬಾರದು ಎಂದು ಶಿವಸೇನಾ ಸಂಸದಸಂಜಯ್ ರಾವುತ್ ಭಾನುವಾರ ತಿಳಿಸಿದ್ದಾರೆ.

ಪಕ್ಷದ ಮುಖವಾಣಿ ಸಾಮ್ನಾದ ಸಾಪ್ತಾಹಿಕ ಅಂಕಣದಲ್ಲಿ ಈ ಕುರಿತು ಉಲ್ಲೇಖ ಮಾಡಿರುವ ರಾವುತ್, ದೇಶೀಯನಿರ್ಮಿತ ಕಾರನ್ನು ಬಳಕೆ ಮಾಡುತ್ತಿದ್ದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಜೀವ ಬೆದರಿಕೆಯ ಹೊರತಾಗಿಯೂ ತಮ್ಮ ಭದ್ರತಾ ಸಿಬ್ಬಂದಿಯನ್ನು ಬದಲಾಯಿಸದಿದ್ದಕ್ಕಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿ ಓಡಾಟಕ್ಕೆ ಅತಿ ಸುರಕ್ಷತೆಯ ಕಾರು

ತಮ್ಮನ್ನು ತಾವೇ 'ಫಕೀರ', 'ಪ್ರಧಾನ ಸೇವಕ' ಎಂದು ಕರೆದುಕೊಳ್ಳುವ ವ್ಯಕ್ತಿ ವಿದೇಶಿ ನಿರ್ಮಿತ ಕಾರನ್ನು ಬಳಸುತ್ತಾರೆ ಎಂದು ಮೋದಿ ವಿರುದ್ಧ ರಾವುತ್ ಟೀಕೆ ಮಾಡಿದರು.

ಪ್ರಧಾನಿ ಮೋದಿ ಅವರ ಓಡಾಟಕ್ಕೆ ಬಿಎಂಡಬ್ಲ್ಯು 7 ಸಿರೀಸ್ ಬದಲಿಗೆ ಮರ್ಸಿಡಿಸ್ ಬೆಂಜ್ನ ಮೆಬ್ಯಾಕ್ 650 ಗಾರ್ಡ್ ಸೆಡಾನ್ ಕಾರನ್ನು ವಿಶೇಷ ರಕ್ಷಣಾ ಗುಂಪು (ಖರೀದಿಸಿದೆ).

'ಪ್ರಧಾನ ಮಂತ್ರಿಗೆ ಭದ್ರತೆ ಮತ್ತು ಸೌಕರ್ಯಗಳು ಮುಖ್ಯವೆನಿಸಿದೆ. 'ಮೇಕ್ ಇನ್ ಇಂಡಿಯಾ', 'ಸ್ಟಾರ್ಟ್ ಅಪ್ ಇಂಡಿಯಾ'ದಂತಹ ಸ್ವದೇಶಿ ಉಪಕ್ರಮಗಳನ್ನು ಆರಂಭಿಸಿರುವ ಮೋದಿ, ವಿದೇಶಿನಿರ್ಮಿತ ಕಾರನ್ನು ಬಳಕೆ ಮಾಡುತ್ತಿದ್ದಾರೆ' ಎಂದು ರಾವುತ್ ಲೇವಡಿ ಮಾಡಿದರು.

'ಮಾಜಿ ಪ್ರಧಾನಿ ಜವಹರಲಾಲ್ ನೆಹರೂಅಪಾಯದ ನಡುವೆಯೂ ದೇಶಿ ನಿರ್ಮಿತ ಅಂಬಾಸಿಡರ್ ಕಾರು ಬಳಕೆ ಮಾಡುತ್ತಿದ್ದರು. ಇಂದಿರಾ ಗಾಂಧಿ ಕೂಡ ಜೀವ ಬೆದರಿಕೆ ಇದ್ದರೂ ಸಿಖ್ ಭದ್ರತಾ ಸಿಬ್ಬಂದಿಯನ್ನು ಬದಲಿಸಲಿಲ್ಲ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡಾ ಎಲ್ಟಿಟಿಇ ಬೆದರಿಕೆಯಿದ್ದರೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜನರ ಜತೆ ಬೆರೆತುಕೊಳ್ಳುವುದರಿಂದ ಹಿಂದೆ ಸರಿದಿರಲಿಲ್ಲ' ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ರಾತ್ರಿ ಕರ್ಫ್ಯೂ ಹೇರಿ ಹಗಲು ಚುನಾವಣಾ ಸಮಾವೇಶ ನಡೆಸುವುದರ ವಿರುದ್ಧವೂ ಸಂಜಯ್ ರಾವುತ್ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.