ನವದೆಹಲಿ: 75ನೇ ಸ್ವಾತಂತ್ರ್ಯ ದಿನೋತ್ಸವದ ಪ್ರಯುಕ್ತ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ಟೆಲಿಪ್ರಾಂಪ್ಟರ್ ಬದಲು ಪೇಪರ್ ನೋಟ್‌ಗಳನ್ನು ಬಳಸಿದರು.

ತಮ್ಮ 83 ನಿಮಿಷಗಳ ಭಾಷಣದಲ್ಲಿ, ಸ್ವಾತಂತ್ರ್ಯಕ್ಕಾಗಿ ತೆರೆಮರೆಯಲ್ಲಿ ಹೋರಾಟ ನಡೆಸಿದ ಸ್ವಾತಂತ್ಯ ಯೋಧರು, ಪಂಚಪ್ರಾಣ, ನಾರಿ ಶಕ್ತಿ, ಭ್ರಷ್ಟಾಚಾರ ಮತ್ತು ಪರಿವಾರವಾದ ಮುಂತಾದ ವಿಷಯಗಳನ್ನು ಅವರು ಪ್ರಸ್ತಾಪಿಸಿದರು.

ಇದು ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದ ನಾಗರಿಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾಡಿದ ಸತತ ಒಂಬತ್ತನೇ ಭಾಷಣವಾಗಿತ್ತು.

ಆದರೆ, ಈ ಭಾಷಣಕ್ಕಾಗಿ ಅವರು ಈ ಹಿಂದಿನಂತೆ ಟೆಲಿಪ್ರಾಂಪ್ಟರ್ ಬಳಸಲಿಲ್ಲ. ಬದಲಿಗೆ ಪೇಪರ್ ನೋಟ್ ಮೊರೆ ಹೋದರು.

ಅರ್ಧಕ್ಕೇ ನಿಂತಿದ್ದ ಭಾಷಣ

ಜನವರಿಯಲ್ಲಿ ವಿಶ್ವ ಆರ್ಥಿಕೆ ವೇದಿಕೆಯನ್ನು ಉದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣವು ಟೆಲಿ ಪ್ರಾಂಪ್ಟರ್ ದೋಷದಿಂದ ಅರ್ಧಕ್ಕೇ ನಿಂತಿತ್ತು. ಆ ವಿಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿತ್ತು. ವಿಡಿಯೊ ಪೋಸ್ಟ್ ಮಾಡಿದ್ದ ಹಲವರು #ಟೆಲಿಪ್ರಾಂಪ್ಟರ್ ಪಿಎಂ ಎಂಬಿತ್ಯಾದಿ ಹ್ಯಾಶ್ ಟ್ಯಾಗ್ ನೀಡಿ ಟ್ರೋಲ್ ಮಾಡಿದ್ದರು. ಮತ್ತೆ ಕೆಲವರು ಇದು ತಾಂತ್ರಿಕ ದೋಷ ಎಂದು ಸಮರ್ಥಿಸಿಕೊಂಡಿದ್ದರು.

ಟೆಲಿಪ್ರಾಂಪ್ಟರ್ ಕೂಡ ಪ್ರಧಾನಿಯವರ ಇಷ್ಟೊಂದು ಸುಳ್ಳು ಸಹಿಸಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ಟೆಲಿಪ್ರಾಂಪ್ಟರ್ ಬಿಟ್ಟು ಪೇಪರ್ ನೋಟ್ಸ್ ಭಾಷಣ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಟೆಲಿಪ್ರಾಂಪ್ಟರ್ ಎಂದರೇನು?

ಟೆಲಿಪ್ರಾಂಪ್ಟರ್ ಅನ್ನು ಆಟೋಕ್ಯೂ ಎಂದೂ ಕರೆಯಲಾಗುತ್ತದೆ. ಇದು ಪ್ರದರ್ಶನ ಸಾಧನವಾಗಿದ್ದು ಭಾಷಣ ಅಥವಾ ಸ್ಕ್ರಿಪ್ಟ್ ಅನ್ನು ಓದಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ದೂರದರ್ಶನದ ಸುದ್ದಿ ವಾಚಕರು ಇದನ್ನು ಬಳಸುತ್ತಾರೆ. ನಿರೂಪಕರನ್ನು ಚಿತ್ರೀಕರಿಸುವ ಕ್ಯಾಮೆರಾಕ್ಕಿಂತ ಸ್ವಲ್ಪ ಕೆಳಗೆ ಇದರ ಪರದೆಯನ್ನು ಇರಿಸಲಾಗಿರುತ್ತದೆ.

ಟೆಲಿಪ್ರಾಂಪ್ಟರ್ ನಿಯಂತ್ರಣವು ಒಬ್ಬ ನಿರ್ವಾಹಕ ಅಥವಾ ಓದುವವರ ಬಳಿಯೇ ಇರುತ್ತದೆ. ಇದರಲ್ಲಿ, ತಾವು ಓದುವ ವೇಗಕ್ಕೆ ಸರಿಯಾಗಿ ಪದಗಳನ್ನು ಅನ್ನು ಚಲಿಸುವಂತೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.