ನವದೆಹಲಿ: ರಾಜಮಾತೆ ವಿಜಯ ರಾಜೇ ಸಿಂಧಿಯಾ ಅವರ 104ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದ್ದಾರೆ.

"ರಾಜಮಾತೆ ವಿಜಯ ರಾಜೇ ಸಿಂಧಿಯಾ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು. ತಮ್ಮ ಇಡೀ ಜೀವನವನ್ನು ಸಾರ್ವಜನಿಕ ಕಲ್ಯಾಣ ಮತ್ತು ದೇಶ ಸೇವೆಗೆ ಮುಡಿಪಾಗಿಟ್ಟರು. ಬಡವರು ಮತ್ತು ಹಿಂದುಳಿದವರಿಗಾಗಿ ಅವರ ಸೇವೆ ಬಲಿಷ್ಠ ಭಾರತವನ್ನು ನಿರ್ಮಿಸಲು ಪ್ರತಿಯೊಬ್ಬರನ್ನು ಪ್ರೇರೇಪಿಸುತ್ತವೆ" ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಿಂಧಿಯಾ ಅವರು ಅಕ್ಟೋಬರ್ 12, 1919ರಂದು ಮಧ್ಯಪ್ರದೇಶದ ಸಾಗರ್‌ದಲ್ಲಿ ಜನಿಸಿದರು. ಗ್ವಾಲಿಯರ್ ರಾಜಮನೆತನಕ್ಕೆ ಸೇರಿದ್ದ ಇವರು, ಜನಸಂಘಕ್ಕೆ ಸೇರುವ ಮೊದಲು ಕಾಂಗ್ರೆಸ್‌ನಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಬಳಿಕ ಬಿಜೆಪಿಯ ತತ್ವ, ಸಿದ್ದಾಂತಗಳ ಪ್ರಬಲ ಪ್ರತಿಪಾದಕರಾದರು.

ಸಿಂಧಿಯಾ ಅವರ ಮೊಮ್ಮಗ ಜ್ಯೋತಿರಾದಿತ್ಯ ಸಿಂಧಿಯಾ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರೆ, ಇಬ್ಬರು ಪುತ್ರಿಯರಾದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತು ಯಶೋಧರ ರಾಜೇ ಕೂಡ ಬಿಜೆಪಿಯಲ್ಲಿದ್ದಾರೆ.

ಸಿಂಧಿಯಾ ಅವರು 1957 ಮತ್ತು 1998ರ ನಡುವೆ ಹಲವು ವರ್ಷಗಳ ಕಾಲ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ವಿಶೇಷವಾಗಿ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶಿಕ್ಷಣದ ಮೂಲಕ ಮಹಿಳೆಯರ ಉನ್ನತಿಗಾಗಿ ಮೀಸಲಾಗಿರುವ ವಿವಿಧ ಸಂಸ್ಥೆಗಳೊಂದಿಗೆ ಕಾರ್ಯ ನಿರ್ವಹಿದ್ದರು. ಇವರು ಜನವರಿ 25, 2001ರಂದು ನಿಧನರಾದರು.
.ಕೆಲವು ಮಾರ್ಗಗಳಲ್ಲಿ ವಿಮಾನ ಪ್ರಯಾಣ ದರ ಶೇ 61ರಷ್ಟು ಇಳಿಕೆ: ಸಚಿವ ಸಿಂದಿಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.