ರಾಂಚಿ: ಭೂಹಗರಣ ಪ್ರಕರಣ ಸಂಬಂಧ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು 5 ದಿನಗಳ ಕಾಲ ಇ.ಡಿ ವಶಕ್ಕೆ ಒಪ್ಪಿಸಿ ಇಲ್ಲಿನ ಹಣ ಅಕ್ರಮ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯ ಆದೇಶಿಸಿದೆ ಎಂದು ವಕೀಲರು ತಿಳಿಸಿದ್ದಾರೆ.

ಸೊರೇನ್ ಅವರನ್ನು 10 ದಿನಗಳ ಕಾಲ ಕಸ್ಟಡಿಗೆ ನೀಡಬೇಕು ಎಂದು ಇ.ಡಿ. ಗುರುವಾರ ವಿನಂತಿಸಿಕೊಂಡಿತ್ತು. ತೀರ್ಪು ಕಾಯ್ದಿರಿಸಿದ್ದ ಕೋರ್ಟ್ ಒಂದು ದಿನದ ಮಟ್ಟಿಗೆ ಇ.ಡಿ ಕಸ್ಟಡಿಗೆ ವಹಿಸಿತ್ತು.
.ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿಚಾರಣೆಗೆ ಇ.ಡಿ. ಹುಡುಕಾಟ.
ಭದ್ರತಾ ಕಾರಣಗಳಿಂದಾಗಿ ರಾತ್ರಿ ಜೈಲಿನಲ್ಲಿ ಇರಲು ತಮ್ಮ ಕಕ್ಷಿದಾರರಿಗೆ ಅನುಮತಿ ನಿಡಬೇಕು ಎಂದು ಸೊರೇನ್ ಪರ ಹಾಜರಾದ ವಕೀಲ ರಾಜೀವ್ ರಂಜನ್ ವಿನಂತಿಸಿಕೊಂಡರು. ಆದರೆ ಈ ಬಗ್ಗೆ ಕೋರ್ಟ್, ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ.

ಜ. 31ರಂದು ಸತತ ಏಳು ಗಂಟೆ ವಿಚಾರಣೆ ನಡೆಸಿ ಹೇಮಂತ್ ಸೊರೇನ್ ಅವರನ್ನು ಇ.ಡಿ ಬಂಧಿಸಿತ್ತು. ಬಂಧನಕ್ಕೂ ಮುನ್ನ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು.
.Jharkhand | ಅಪ್ಪ ಶಿಬು ಸೊರೇನ್ 20 ದಿನ; ಮಗ ಹೇಮಂತ್ 24 ಗಂಟೆ ನಾಪತ್ತೆ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.