ಮುಂಬೈ: ಆಲ್ಟ್ ಬಾಲಾಜಿ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ‘ಗಂದಿ ಬಾತ್’ ಎಂಬ ವೆಬ್ ಸರಣಿಯ ಅಶ್ಲೀಲ ದೃಶ್ಯದಲ್ಲಿ ಮಕ್ಕಳನ್ನು ಬಳಸಲಾಗಿದೆ ಎಂಬ ಆರೋಪದಡಿ ನಿರ್ಮಾಪಕಿಯರಾದ ಬಾಲಿವುಡ್ ನಟ ಜಿತೇಂದ್ರ ಪುತ್ರಿ ಏಕ್ತಾ ಕಪೂರ್ ಹಾಗೂ ಅವರ ಪತ್ನಿ ಶೋಭಾ ಕಪೂರ್ ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

ಕಿರು ಚಿತ್ರಗಳ ಮಾದರಿಯಲ್ಲಿ ವಯಸ್ಕರಿಗಾಗಿ ಆಲ್ಟ್ ಬಾಲಾಜಿ ನಿರ್ಮಿಸಿದ್ದ ‘ಗಂದಿ ಬಾತ್’ ಹಲವು ಆವೃತ್ತಿಗಳಲ್ಲಿ ಪ್ರದರ್ಶನ ಕಂಡಿದೆ. 2018ರಿಂದ ಒಟ್ಟು ಏಳು ಸರಣಿಯಲ್ಲಿ 28 ಎಪಿಸೋಡ್ಗಳು ಪ್ರಸಾರವಾಗಿವೆ. ಇದರಲ್ಲಿ ಅಶ್ಲೀಲ ದೃಶ್ಯಗಳಲ್ಲಿ ಮಕ್ಕಳನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂಬ ದೂರು ದಾಖಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ದೂರಿನನ್ವಯ ಅ. 24ರಂದು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಈ ಇಬ್ಬರಿಗೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.