ನವದೆಹಲಿ:ಶ್ರೀಮಂತರ ಬಳಿ ದರೋಡೆ ಮಾಡಿ, ಅದರಲ್ಲಿ ಒಂದಿಷ್ಟನ್ನು ಬಡವರಿಗೆ ನೀಡುತ್ತಿದ್ದಗ್ಯಾಂಗ್ನ ನಾಯಕನನ್ನು ರಾಷ್ಟ್ರ ರಾಜಧಾನಿಯಲ್ಲಿ ಬಂಧಿಸಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ವಾಸಿಮ್ ಅಕ್ರಮ್ (27) ಅಲಿಯಾಸ್ ಲಂಬು ಮತ್ತು ಆತನ ಸಹಚರರುದೆಹಲಿಯಲ್ಲಿರುವ ಪ್ರಮುಖ ಬಡಾವಣೆಗಳಲ್ಲಿನಶ್ರೀಮಂತರ ಮನೆಗಳಿಗೆ ನುಗ್ಗಿ ಹಣ ಮತ್ತು ಆಭರಣಗಳನ್ನು ದೋಚುತ್ತಿದ್ದರು. ಅದರಲ್ಲಿ ಒಂದಿಷ್ಟನ್ನು ಬಡವರಿಗೆ ನೀಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

'ಇದರಿಂದಾಗಿ (ಹಣ ನೀಡುತ್ತಿದ್ದುದ್ದರಿಂದ) ಈ ಭಾಗದಲ್ಲಿ ಅವನಿಗೆ ಸಾಕಷ್ಟು ಹಿಂಬಾಲಕರಿದ್ದರು. ಅವರು ಪೊಲೀಸರ ಚಟುವಟಿಕೆ ಬಗ್ಗೆ ತಕ್ಷಣವೇ ಮಾಹಿತಿ ನೀಡುತ್ತಿದ್ದರು. ಇದು ತಪ್ಪಿಸಿಕೊಳ್ಳಲು ಅವನಿಗೆ ನೆರವಾಗುತ್ತಿತ್ತು' ಎಂದು ಪೊಲೀಸರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ದರೋಡೆಕೋರಅಕ್ರಮ್ ತನ್ನ ಅಡಗುತಾಣವನ್ನುದೇಶದ ಹಲವು ರಾಜ್ಯಗಳಿಗೆ ನಿಯಮಿತವಾಗಿ ಬದಲಾಯಿಸುತ್ತಿದ್ದ.ಅಂದಹಾಗೆ ಈತನ ಹೆಸರಿನಲ್ಲಿ, ದರೋಡೆ, ಕೊಲೆ ಯತ್ನ ಹಾಗೂ ಅತ್ಯಾಚಾರ ಸೇರಿದಂತೆ 160 ಅಪರಾಧ ಪ್ರಕರಣಗಳಿವೆಎಂದು ಹೇಳಲಾಗಿದೆ.

'ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ರಚಿಸಿದ ವಿಶೇಷ ತಂಡ ಆನಂದ್ ವಿಹಾರ್ ರೈಲು ನಿಲ್ದಾಣದ ಸಮೀಪಅಕ್ರಮ್ನನ್ನು ಸೆರೆ ಹಿಡಿದಿದೆ. ಸಿಂಗಲ್ ಶಾಟ್ ಪಿಸ್ತೂಲ್ ಹಾಗೂ ಮೂರು ಜೀವಂತ ಕಾರ್ಟ್ರಿಡ್ಜ್ ಅನ್ನು ವಶಕ್ಕೆ ಪಡೆಯಲಾಗಿದೆ' ಎಂದೂ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.