ಲಖನೌ: ಉತ್ತರ ಪ್ರದೇಶದಲ್ಲಿ ಕೋಮು ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಲಾಗುವ ಮುಜಫ್ಫರ್ನಗರ ಜಿಲ್ಲೆಯ ‘ಕಾಂವಡ್ ಯಾತ್ರೆ ಮಾರ್ಗದಲ್ಲಿನ’ ತಿಂಡಿ–ತಿನಿಸುಗಳ ಮಳಿಗೆಗಳ ಮಾಲೀಕರು ತಮ್ಮ ಹೆಸರನ್ನು ಮಳಿಗೆಗಳ ಮುಂದೆ ಉಲ್ಲೇಖಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ. ಹೀಗೆ ಮಾಡುವುದರಿಂದ, ಯಾತ್ರಿಕರಿಗೆ ಗೊಂದಲ ಉಂಟಾಗುವುದು ತಪ್ಪುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ವಿವಾದಗಳು ಹಾಗೂ ಉದ್ವಿಗ್ನತೆಯನ್ನು ತಡೆಯುವ ಉದ್ದೇಶದಿಂದ ಈ ಸೂಚನೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರಾದರೂ, ಮುಸ್ಲಿಂ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಅವರು ಈ ಸೂಚನೆ ನೀಡಿದ್ದಾರೆ ಎಂದು ಹಲವರು ಭಾವಿಸಿದ್ದಾರೆ.

ಕಾಂವಡ್ ಯಾತ್ರೆಯ ಮಾರ್ಗದಲ್ಲಿ ಇರುವ ಹಲವು ಮಳಿಗೆಗಳು ಹಿಂದೂ ದೇವರ ಹೆಸರು ಹೊಂದಿದ್ದರೂ, ಅವುಗಳನ್ನು ನಿರ್ವಹಿಸುತ್ತಿರುವವರು ಮುಸ್ಲಿಮರು ಎಂದು ಬಿಜೆಪಿಯ ಶಾಸಕರಾದ ಕಪಿಲ್ ದೇವ್ ಅಗರ್ವಾಲ್ ಮತ್ತು ನಂದಕಿಶೋರ್ ಗುಜ್ಜರ್ ಅವರು ಈ ಹಿಂದೆ ದೂರಿದ್ದರು. ಇಂತಹ ಮಳಿಗೆಗಳನ್ನು ಮುಚ್ಚಬೇಕು ಅಥವಾ ಅವುಗಳ ಮಾಲೀಕರ ಹೆಸರನ್ನು ಮಳಿಗೆಗಳ ಮುಂದೆ ಉಲ್ಲೇಖಿಸುವಂತೆ ಸೂಚಿಸಬೇಕು ಎಂದು ಅವರು ಆಗ್ರಹಿಸಿದ್ದರು.

‘ಸೂಚನೆಯು ಹೋಟೆಲ್ಗಳು, ಢಾಬಾಗಳು ಮತ್ತು ರಸ್ತೆಬದಿಯ ತಿಂಡಿ–ತಿನಿಸುಗಳ ಮಳಿಗೆಗಳಿಗೆ ಅನ್ವಯವಾಗುತ್ತದೆ’ ಎಂದು ಮುಜಫ್ಫರ್ನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇವುಗಳ ಮಾಲೀಕರ ನಿಜ ಗುರುತನ್ನು ಮರೆಮಾಚುವುದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಯಾತ್ರಿಕರು ಈ ಮಾರ್ಗದಲ್ಲಿ ನಿಂತು ಊಟ, ತಿಂಡಿ ಸೇವಿಸುತ್ತಾರೆ.

ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ಬೇರೆ ಬೇರೆ ಭಾಗಗಳಿಂದ ಬರುವ ಯಾತ್ರಿಕರು ಮುಜಫ್ಫರ್ನಗರದ ಮೂಲಕ ಸಾಗುತ್ತಾರೆ.

ಪೊಲೀಸರು ನೀಡಿರುವ ಸೂಚನೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು, ಈ ಬಗ್ಗೆ ನ್ಯಾಯಾಲಯಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡು, ಆಡಳಿತ ವ್ಯವಸ್ಥೆಗೆ ಸೂಕ್ತ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

‘ತಿಂಡಿ–ತಿನಿಸುಗಳ ಮಳಿಗೆಗಳ ಹೆಸರು ಗುಡ್ಡು, ಮುನ್ನಾ, ಛೋಟು ಅಥವಾ ಫಟ್ಟೆ ಎಂದಿದ್ದರೆ ಏನಾಗುತ್ತದೆ? ಅವರ ಹೆಸರು ಏನನ್ನು ಸೂಚಿಸುತ್ತದೆ’ ಎಂದು ಅಖಿಲೇಶ್ ಅವರು ಎಕ್ಸ್ ಮೂಲಕ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.