ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಕೆಲವು ಆ್ಯಪ್‌ಗಳ ಮೂಲಕ ಅವುಗಳನ್ನು ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಂಧನವನ್ನು ಪ್ರಶ್ನಿಸಿ ರಾಜ್ ಕುಂದ್ರಾ ಮತ್ತು ಅವರ ಸಹಚರ ರಿಯಾನ್ ಥಾರ್ಪ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಶನಿವಾರ ತಿರಸ್ಕರಿಸಿದೆ.

ಕಳೆದ ತಿಂಗಳು ಉದ್ಯಮಿ ರಾಜ್ ಕುಂದ್ರಾ ಮತ್ತು ಥಾರ್ಪ್ ಅವರನ್ನು ಬಂಧಿಸಲಾಗಿತ್ತು. ಈ ಬಳಿಕ ಮೊದಲಿಗೆ ಅವರಿಬ್ಬರನ್ನು ಪೊಲೀಸ್ ಕಸ್ಟಡಿ ಮತ್ತು ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಗಡ್ಕರಿ ಅವರ ಏಕಸದಸ್ಯ ಪೀಠವು ‘ಕುಂದ್ರಾ ಮತ್ತು ಥಾರ್ಪ್ ಅವರ ಅರ್ಜಿಯನ್ನು ತಿರಸ್ಕರಿಸಿದ್ದು, ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಆದೇಶದಂತೆ ಆರೋಪಿಗಳಿಬ್ಬರಿಗೆ ನೀಡಲಾಗಿದ್ದ ಪೊಲೀಸ್ ಕಸ್ಟಡಿ ಮತ್ತು ನಂತರದ ನ್ಯಾಯಾಂಗ ಬಂಧನವು ಕಾನೂನಿನ ಮಿತಿಯಲ್ಲಿಯೇ ಇದೆ. ಹಾಗಾಗಿ ಇದರಲ್ಲಿ ಮಧ್ಯಸ್ಥಿಕೆವಹಿಸುವ ಅವಶ್ಯಕತೆ ಇಲ್ಲ’ ಎಂದಿದೆ.

ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ಕೊಲೆ ಯತ್ನ: ಮೂವರ ಬಂಧನ

‘ನಮ್ಮನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ. ಬಂಧನಕ್ಕೂ ಮುನ್ನ (ಸಿಆರ್‌ಪಿಸಿ) ಸೆಕ್ಷನ್ 41ಎ ಅಡಿಯಲ್ಲಿ ಕಡ್ಡಾಯವಾಗಿ ನೋಟಿಸ್ ಜಾರಿಗೊಳಿಸುವ ನಿಯಮವನ್ನು ಅಧಿಕಾರಿಗಳು ಅನುಸರಿಸಿಲ್ಲ. ಹಾಗಾಗಿ ತಮ್ಮನ್ನು ಕೂಡಲೇ ಬಿಡುಗಡೆಗೊಳಿಸಬೇಕು ಮತ್ತು ನಮ್ಮ ಬಂಧನಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಅವರು ಹೊರಡಿಸಿರುವ ಎರಡೂ ಆದೇಶಗಳನ್ನು ರದ್ದುಗೊಳಿಸಬೇಕು’ ಎಂದು ಕುಂದ್ರಾ ಮತ್ತು ಥಾರ್ಪ್ ಅವರು ಅರ್ಜಿಯಲ್ಲಿ ಮನವಿ ಮಾಡಿದ್ದರು.

ಆದರೆ ಪೊಲೀಸರು ಈ ಆರೋಪವನ್ನು ಅಲ್ಲಗೆಳೆದಿದ್ದು, ತಾವು ರಾಜ್ ಕುಂದ್ರಾಗೆ ನೋಟಿಸ್ ಜಾರಿ ಮಾಡಿದ್ದೆವು. ಆದರೆ ಅವರೇ ಅದನ್ನು ಸ್ವೀಕರಿಸಿರಲಿಲ್ಲ ಎಂದು ಹೇಳಿದ್ದಾರೆ.

‘ಜುಲೈ 19 ರಂದು ಪೊಲೀಸರು ರಾಜ್ ಕುಂದ್ರಾನನ್ನು ಬಂಧಿಸಿದ್ದರು ಮತ್ತು ಅವರ ಮೊಬೈಲ್ ಫೋನ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆದಿದ್ದರು. ಆದರೆ ರಾಜ್ ಕುಂದ್ರಾ ಸಾಕ್ಷಿಗಳನ್ನು ನಾಶಪಡಿಸಿದ್ದಾರೆ ಎಂಬ ಆರೋಪವನ್ನು ಜುಲೈ 23ರಂದು ಎಫ್‌ಐಆರ್‌ನಲ್ಲಿ ಸೇರಿಸಿದ್ದಾರೆ. ಈ ಆರೋಪವನ್ನು ಸಾಬೀತುಪಡಿಸಲು ಅವರ ಬಳಿಯಾವುದೇ ಸಾಕ್ಷಿಗಳು ಕೂಡ ಇಲ್ಲ’ ಎಂದು ಕುಂದ್ರಾ ಪರ ಹಿರಿಯ ವಕೀಲ ಆಬಾದ್ ಪೋಂಡ ಅವರು ವಾದಿಸಿದರು.

ಪೆಗಾಸಸ್ ಗೂಢಚರ್ಯೆ | ಕಾಂಗ್ರೆಸ್ ಪಕ್ಷದಿಂದ ಸಂಸತ್ತಿನ ದುರ್ಬಳಕೆ: ಬಿಜೆಪಿ ಆರೋಪ

‘ಕುಂದ್ರಾ ಅವರ ಲ್ಯಾಪ್‌ಟಾಪ್‌ನಲ್ಲಿ ಹಲವು ವಿಡಿಯೊ ಕ್ಲಿಪ್‌ಗಳು ಸಿಕ್ಕಿವೆ. ಅಲ್ಲದೆ ಕುಂದ್ರಾ ಮತ್ತು ಥಾರ್ಫ್ ಬಂಧನ ಮತ್ತು ಕಸ್ಟಡಿಗೆ ಬೇಕಾಗಿರುವವಷ್ಟು ಸಾಕ್ಷಿ ಆಧಾರಗಳು ನಮ್ಮ ಬಳಿ ಇವೆ’ ಎಂದು ಪೊಲೀಸರ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಅರುಣ್ ಪೈ ಅವರು ವಾದ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.