ಅಮೃತಸರ (ಪಿಟಿಐ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿ ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಹುತಾತ್ಮರನವೀಕೃತ ಸ್ಮಾರಕವನ್ನು ವರ್ಚುವಲ್ ವೇದಿಕೆಯಲ್ಲಿ ಉದ್ಘಾಟಿಸಿದರು.

ಉದ್ಘಾಟನೆಗೂ ಮುನ್ನ ಹತ್ಯಾಕಾಂಡದಲ್ಲಿ ಹುತಾತ್ಮರಾಗಿದ್ದವರ ನೆನಪಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು. ನವೀಕೃತ ಸ್ಮಾರಕದ ಬಳಿ ಐತಿಹಾಸಿಕ ಘಟನೆಯ ಚಿತ್ರಣವನ್ನು ನೀಡುವ ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಲಾಗಿದೆ.

1919ರ ಏಪ್ರಿಲ್ 13 ರಂದು ನಡೆದಿದ್ದ, ಶಾಂತಿಯುತ ಪ್ರತಿಭಟನೆ ಮೇಲೆ ಬ್ರಿಟಿಷ್ ಸೇನೆ ಮನಸೋಇಚ್ಛೆ ಗುಂಡುಹಾರಿಸಿದ ಪರಿಣಾಮ ಸುಮಾರು 1000 ಮಂದಿ ಮೃತಪಟ್ಟಿದ್ದ ಘಟನೆ ಬಿಂಬಿಸಲು ಧ್ವನಿ ಮತ್ತು ಬೆಳಗಿನ ವ್ಯವಸ್ಥೆ ಅಳವಡಿಸಲಾಗಿದೆ.

ಈವರೆಗೆ ಸಮರ್ಪಕವಾಗಿ ಬಳಕೆಯಾಗದಿದ್ದ ಕಟ್ಟಡದಲ್ಲಿ ನಾಲ್ಕು ಸಂಗ್ರಹಾಲಯ, ಗ್ಯಾಲರಿಗಳಿವೆ. ಇಲ್ಲಿ ದೃಶ್ಯ ಮತ್ತು ಶ್ರವ್ಯ ಮಾಧ್ಯಮ, 3ಡಿ ಪ್ರದರ್ಶನ, ಉಬ್ಬು ಚಿತ್ರಗಳ ಮೂಲಕ ಐತಿಹಾಸಿಕ ಘಟನೆಗಳ ಚಿತ್ರಣಗಳನ್ನು ಬಿಂಬಿಸಲಾಗಿದೆ.

ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಇತಿಹಾಸದ ಘಟನೆಗಳು ನಮಗೆ ಭವಿಷ್ಯದಲ್ಲಿ ಹೇಗೆ ಸಾಗಬೇಕು, ಸಾಗಬೇಕಾದ ಮಾರ್ಗ ಯಾವುದು ಎಂಬುದನ್ನು ತಿಳಿಸಲಿವೆ ಎಂದು ಪ್ರತಿಪಾದಿಸಿದರು.

ಸಿಖ್ಕರ ಪ್ರಾರ್ಥನೆ ‘ಗುರ್ಬಾನಿ’ಯು ಅನ್ಯರಿಗೆ ಸೇವೆ ಸಲ್ಲಿಸುವುದರಿಂದ ಸಂತಸ ಆವರಿಸಿಕೊಳ್ಳಲಿದೆ ಎಂಬುದನ್ನು ತಿಳಿಸಲಿದೆ. ಪಂಜಾಬ್ ಮತ್ತು ದೇಶವನ್ನು ಎಲ್ಲ ಆಯಾಮಗಳಿಂದ ಅಭಿವೃದ್ಧಿಗೊಳಿಸಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.