ನವದೆಹಲಿ:ನೀರು ಮತ್ತು ಗಾಳಿ ಮಲಿನಗೊಂಡಿದೆ ಎಂದು ಆರೋಪಿಸಿ ಕಳೆದ ವರ್ಷ ಜನರು ಪ್ರತಿಭಟನೆ ನಡೆಸಿದ ಪರಿಣಾಮ ತಮಿಳುನಾಡಿನ ತೂತ್ತುಕುಡಿಯಲ್ಲಿರುವ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕಸ್ಥಗಿತಗೊಂಡಿತ್ತು. ಘಟಕವನ್ನು ತೆರೆಯದಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.

ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ಪುನರಾರಂಭಿಸಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್ಜಿಟಿ) ಅವಕಾಶ ನೀಡಿತ್ತು. ಎನ್ಜಿಟಿ ತೀರ್ಪಿನ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸ್ಟೆರ್ಲೈಟ್ ಘಟಕ ಪುನರಾರಂಭಿಸಲು ಎನ್ಜಿಟಿ ನೀಡಿದ್ದ ಅವಕಾಶವನ್ನು ತಳ್ಳಿ ಹಾಕಿದೆ. ಈ ಪ್ರಕರಣ ಎನ್ಜಿಟಿ ವ್ಯಾಪ್ತಿಗೆ ಬರುವುದಿಲ್ಲ ಎಂದಿರುವ ಕೋರ್ಟ್, ಘಟಕ ಮತ್ತೆ ತೆರೆಯಲು ವೇದಾಂತ ಕಂಪನಿಯು ಮದ್ರಾಸ್ ಹೈ ಕೋರ್ಟ್ಗೆ ಮನವಿ ಮಾಡಬಹುದು ಎಂದು ಹೇಳಿದೆ.

ಕಾರ್ಖಾನೆಯು ಇರುವ ಪ್ರದೇಶದ ನೀರು ಮತ್ತು ಗಾಳಿ ಮಲಿನಗೊಂಡಿದೆ ಎಂದು ಅಲ್ಲಿನ ಜನರು ಆರೋಪಿಸಿ ದೀರ್ಘಾವಧಿ ಪ್ರತಿಭಟನೆ ನಡೆಸಿದ್ದರು.ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ಮುಚ್ಚಬೇಕು ಎಂದು ಆಗ್ರಹಿಸಿ 2018ರ ಮೇನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ್ದರು. ಗೋಲಿಬಾರ್ನಲ್ಲಿ 13 ಮಂದಿ ಮೃತಪಟ್ಟಿದ್ದರು. ಘಟಕವನ್ನು ಮುಚ್ಚುವಂತೆ ತಮಿಳುನಾಡು ಸರ್ಕಾರ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.