ನವದೆಹಲಿ: ದೆಹಲಿಯ ವಾಯವ್ಯ ಭಾಗದ ಮಂಗೋಲ್ಪುರಿಯಲ್ಲಿ ಅನಧಿಕೃತ ನಿರ್ಮಾಣ ಆರೋಪದಡಿ ಮಸೀದಿ ಸಂಕೀರ್ಣವನ್ನು ಭಾಗಶಃ ನೆಲಸಮಗೊಳಿಸಲಾಯಿತು. ನೆಲಸಮದ ಕಾರ್ಯ ವಿರೋಧಿಸಿ ಸ್ಥಳೀಯರು ಪ್ರತಿಭಟಿಸಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ನೆಲಸಮ ಕಾರ್ಯಾಚರಣೆಯನ್ನು ದೆಹಲಿ ಮಹಾನಗರಪಾಲಿಕೆ ಕೈಗೊಂಡಿತು. ಆದರೆ, ಈ ತನ್ನ ಕಾರ್ಯಾಚರಣೆ ಕುರಿತು ಸದ್ಯಕ್ಕೆ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿಲ್ಲ.

ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಸ್ಥಳೀಯ ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯೊಂದಿಗೆ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬೆಳಿಗ್ಗೆ ಧಾವಿಸಿದ್ದು, ಮಸೀದಿಯ ಅನಧಿಕೃತ ನಿರ್ಮಾಣ ಎಂದು ಆರೋಪಿತವಾದ ಭಾಗವನ್ನು ನೆಲಸಮಗೊಳಿಸುವ ಕಾರ್ಯ ಆರಂಭಿಸಿದರು.

ಈ ಕಾರ್ಯಾಚರಣೆಯು ಬೆಳಿಗ್ಗೆ 6 ಗಂಟೆಗೆ ಆರಂಭವಾಯಿತು. ಸ್ಥಳದಲ್ಲಿ ಗುಂಪುಗೂಡಿದ ಸ್ಥಳೀಯರು ಇದರ ವಿರುದ್ಧ ಪ್ರತಿಭಟನೆ ನಡೆಸಿದರು. ಕಲ್ಲು ತೂರಾಟದ ಘಟನೆಗಳೂ ನಡೆದವು ಎಂದು ಹೇಳಲಾಗಿದೆ. ಆದರೆ, ಇದನ್ನು ಪೊಲೀಸರು ನಿರಾಕರಿಸಿದ್ದಾರೆ.

ಡಿಸಿಪಿ (ಹೊರವಲಯ) ಜಿಮ್ಮಿ ಚಿರಂ ಅವರು, ‘ನೆಲಸಮಗೊಳಿಸುವುದಕ್ಕೆ ಕೆಲವರು ಆಕ್ಷೇಪಿಸಿದರು. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ತಿಳಿಸಿದ್ದಾರೆ.

ಅನಧಿಕೃತ ನಿರ್ಮಾಣದ ಕೆಲ ಗೋಡೆ ಕೆಡವಲಾಯಿತು. ನಿರ್ಮಾಣ ದೃಢವಾಗಿರುವ ಕಾರಣ ಕಾರ್ಯಾಚರಣೆಗೆ ಬೃಹತ್ ಯಂತ್ರದ ಅಗತ್ಯ ಎಂದು ಮನಗಂಡ ಅಧಿಕಾರಿಗಳು, ಬಳಿಕ ತಾತ್ಕಾಲಿಕವಾಗಿ ನೆಲಸಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.