ನವದೆಹಲಿ: ಆನ್‌ಲೈನ್‌ನಲ್ಲಿ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ಇಲ್ಲಿಯವರೆಗೆ ಉಚಿತವಾಗಿ ನೀಡಲಾಗುತ್ತಿದ್ದ ಪ್ರಯಾಣ ವಿಮಾ ಸೌಲಭ್ಯ ಸೆಪ್ಟೆಂಬರ್ 1ರಿಂದ ರದ್ದಾಗಲಿದೆ.

ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಡಿಸೆಂಬರ್ 2017ರಲ್ಲಿ ಉಚಿತ ವಿಮಾ ಸೌಲಭ್ಯ ಆರಂಭಿಸಿತ್ತು.

ಸೆಪ್ಟೆಂಬರ್ 1ರ ನಂತರ ಆನ್‌ಲೈನ್‌ನಲ್ಲಿ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರು ಒಂದು ವೇಳೆ ವಿಮಾ ಸೌಲಭ್ಯ ಆಯ್ಕೆ ಮಾಡಿಕೊಂಡರೆ ಅದಕ್ಕೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಹೆಚ್ಚುವರಿ ಶುಲ್ಕದ ಮಾಹಿತಿಯನ್ನು ಐಆರ್‌ಸಿಟಿಸಿ ಶೀಘ್ರ ಪ್ರಕಟಿಸಲಿದೆ.

ರೈಲ್ವೆ ಪ್ರಯಾಣದ ವೇಳೆ ಸಂಭವಿಸುವ ಅವಘಡಗಳಲ್ಲಿ ಮೃತಪಟ್ಟ ಪ್ರಯಾಣಿಕರ ಕುಟುಂಬಕ್ಕೆ ₹10 ಲಕ್ಷ, ಅಂಗವೈಕಲ್ಯಕ್ಕೆ ₹7.5 ಲಕ್ಷ, ಗಾಯಾಳುಗಳಿಗೆ ₹2 ಲಕ್ಷ ಮತ್ತು ಶವ ಸಾಗಿಸಲು ₹10 ಸಾವಿರ ವಿಮಾ ಹಣವನ್ನು ಐಆರ್‌ಸಿಟಿಸಿ ನೀಡುತಿತ್ತು. ಇದಕ್ಕಾಗಿ ಐಆರ್‌ಸಿಟಿಸಿ ಹಲವು ವಿಮಾ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.