ಜೈಪುರ: ರಾಜಸ್ಥಾನ ರಾಜ್ಯ ಸಂಪುಟದ 15 ಮಂದಿ ಹೊಸ ಸಚಿವರುಗಳು ಭಾನುವಾರ ಸಂಜೆ 4 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸುವರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂಪುಟ ಪುನರ್ರಚನೆ ಭಾಗವಾಗಿ ಈ ಕಾರ್ಯಕ್ರಮ ನಡೆಯಲಿದೆ. 11 ಮಂದಿ ಸಂಪುಟ ಸಚಿವರು ಮತ್ತು ನಾಲ್ಕು ಮಂದಿ ರಾಜ್ಯ ಖಾತೆ ಸಚಿವರುಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಜಸ್ಥಾನದ ಹೊಸ ಸಚಿವ ಸಂಪುಟವು 11 ಮಂದಿ ಹೊಸಬರನ್ನು ಒಳಗೊಳ್ಳಲಿದೆ. ಇದರಲ್ಲಿ ಸಚಿನ್ ಪೈಲಟ್ ಬಣದ 5 ಮಂದಿ ಕೂಡ ಸೇರಿರುತ್ತಾರೆ. 2018ರ ಡಿಸೆಂಬರ್ನಲ್ಲಿ ಅಶೋಕ್ ಗೆಹಲೋತ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸಂಪುಟ ಪುನರ್ರಚನೆ ಆಗುತ್ತಿದೆ.

ಸಚಿವರುಗಳಾದ ಗೋವಿಂದ್ ಸಿಂಗ್, ಹರೀಶ್ ಚೌಧರಿ ಮತ್ತು ರಘು ಶರ್ಮಾ ಅವರನ್ನು ಸಂಪುಟದಿಂದ ಕೈಬಿಡಲಾಗಿದ್ದು ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ರಾಜ್ಯ ಖಾತೆ ಸಚಿವರುಗಳಾಗಿದ್ದ ಮಮತಾ ಭೂಪೇಶ್, ಟಿಕಾರಾಂ ಜುಲ್ಲಿ ಮತ್ತು ಭಜನ್ ಲಾಲ್ ಜತಾವ್ ಅವರು ಸಂಪುಟ ದರ್ಜೆಯ ಸಚಿವರುಗಳಾಗಲಿದ್ದಾರೆ.

ಗೋವಿಂದ್ ಸಿಂಗ್, ಹರೀಶ್ ಚೌಧರಿ ಮತ್ತು ರಘು ಶರ್ಮಾ ಅವರು ಶುಕ್ರವಾರ ರಾಜೀನಾಮೆ ನೀಡಿದ್ದರು. ಇವರು ಪಕ್ಷದ ವಿವಿಧ ಹುದ್ದೆಗಳಲ್ಲಿ ಸ್ಥಾನ ಪಡೆದಿದ್ದಾರೆ. ಈ ಕಾರಣ ಒಬ್ಬರಿಗೆ ಒಂದು ಸ್ಥಾನ ಸೂತ್ರದಡಿಇವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಘು ಶರ್ಮಾ ಅವರು ಗುಜರಾತ್ ರಾಜ್ಯಕ್ಕೆ ಎಐಸಿಸಿ ಉಸ್ತುವಾರಿಯಾಗಿದ್ದರೆ, ಹರೀಶ್ ಚೌಧರಿ ಅವರು ಪಂಜಾಬ್ ಎಐಸಿಸಿ ಉಸ್ತುವಾರಿ ಹೊಣೆ ಹೊತ್ತಿದ್ದಾರೆ. ಗೋವಿಂದ್ ಸಿಂಗ್ ಅವರು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಅಶೋಕ್ ಗೆಹಲೋತ್ ನೇತೃತ್ವದ ಕಾಂಗ್ರೆಸ್ ಸರ್ಕಾರವು, ರಾಜೀನಾಮೆ ನೀಡಿದ 18 ಸಚಿವರು ಸೇರಿದಂತೆ ಒಟ್ಟು 30 ಸಚಿವರುಗಳನ್ನು ಹೊಂದಿರಲಿದೆ.

ಇದನ್ನೂ ಓದಿ:ರಾಜಸ್ಥಾನ ಸಂಪುಟ ಪುನರ್ರಚನೆ: 12 ಮಂದಿ ಹೊಸಬರು, ಪೈಲಟ್ ಬಣದಿಂದ ಐವರಿಗೆ ಅವಕಾಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.