ಜೈಪುರ: ‘ಕಾಯಕಲ್ಪ’ ಯೋಜನೆ ಅಡಿಯಲ್ಲಿ ಸರ್ಕಾರಿ ಕಾಲೇಜು ಕಟ್ಟಡಗಳ ಹೊರ ಗೋಡೆಗಳಿಗೆ ಹಾಗೂ ಪ್ರವೇಶ ಕೊಠಡಿಗೆ ಕೇಸರಿ ಬಣ್ಣ ಬಳಿಯುವಂತೆ 20 ಕಾಲೇಜುಗಳಿಗೆ ಕಾಲೇಜು ಶಿಕ್ಷಣ ಕಮಿಷನರೇಟ್ ನಿರ್ದೇಶನ ನೀಡಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವ ದೃಷ್ಟಿಯಿಂದ ಈ ಕೈಗೊಳ್ಳಲಾಗಿದೆ ಎಂದು ಕಮಿಷನರೇಟ್ ಹೇಳಿದೆ. ಈ ಆದೇಶವನ್ನು ಕಮಿಷನರೇಟ್ ಕಳೆದ ತಿಂಗಳು ಹೊರಡಿಸಿತ್ತು.

ಕಾಯಕಲ್ಪ ಯೋಜನೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಅಭಿವೃದ್ಧಿ ಸಚಿವಾಲಯ ಆರಂಭಿಸಿದೆ. ಕಾಲೇಜುಗಳಲ್ಲಿ ಶುಚಿತ್ವದ ಕುರಿತು ಜಾಗೃತಿ ಮೂಡಿಸಲು ಈ ಯೋಜನೆ ರೂಪಿಸಲಾಗಿದೆ.

‘ಮೊದಲ ಹಂತವಾಗಿ, ಪ್ರತೀ ಜಿಲ್ಲೆಯಲ್ಲಿ ಎರಡು ಕಾಲೇಜುಗಳಂತೆ ಒಟ್ಟು 20 ಕಾಲೇಜುಗಳಿಗೆ ನಿರ್ದೇಶನ ನೀಡಲಾಗಿದೆ. ಕಾಲೇಜುಗಳು ಉನ್ನತ ಶಿಕ್ಷಣದ ಕೇಂದ್ರಗಳು. ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಿದ್ದಂತೆಯೇ ಅವರಿಗೆ ಸಕಾರಾತ್ಮಕ ಭಾವನೆ ಉಂಟಾಗಬೇಕು. ಆದ್ದರಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.

‘ಏಷಿಯನ್ ಪೇಂಟ್ಸ್ ವೈಟ್ ಗೋಲ್ಡ್ 8292’ ಹಾಗೂ ‘ಏಷಿಯನ್ ಪೇಂಟ್ಸ್ ಆರೆಂಜ್ ಕ್ರೌನ್ 7974’ ಬಣ್ಣಗಳ ಮಾದರಿಯನ್ನೇ ಬಳಸಬೇಕು’ ಎಂದೂ ಎಲ್ಲ ಕಾಲೇಜುಗಳಿಗೆ ಸೂಚಿಸಲಾಗಿದೆ.

ಸರ್ಕಾರದ ಈ ಕ್ರಮಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.