ಜೈಪುರ: ಗುಂಪು ಹಲ್ಲೆ ತಡೆ ಮಸೂದೆಗೆ ರಾಜಸ್ಥಾನ ವಿಧಾನಸಭೆಯಲ್ಲಿ ಅನುಮೋದನೆ ಲಭಿಸಿದೆ.ಗುಂಪು ಹಲ್ಲೆ ಪ್ರಕರಣದಲ್ಲಿ ಸಂತ್ರಸ್ತರು ಸಾವಿಗೀಡಾದರೆ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು₹5 ಲಕ್ಷದವರಗೆ ದಂಡ ವಿಧಿಸಬೇಕು ಎಂದು ಈ ಮಸೂದೆಯಲ್ಲಿದೆ.

ಜುಲೈ 30ರಂದು ಕಾನೂನು ಸಚಿವ ಶಾಂತಿ ಧರಿವಾಲ್ ಅವರು ಗುಂಪು ಹಲ್ಲೆಯಿಂದ ರಕ್ಷಣೆ ಮಾಡುವ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು.ಆಗಸ್ಟ್ 5 ಸೋಮವಾರ ಈ ಮಸೂದೆ ಬಗ್ಗೆ ಚರ್ಚೆ ನಡೆದು ಅನುಮೋದನೆ ಲಭಿಸಿದೆ.

ಕಾಂಗ್ರೆಸ್ ಆಡಳಿತವಿರುವ ಮಧ್ಯಪ್ರದೇಶದ ನಂತರ ಗುಂಪು ಹಲ್ಲೆ ತಡೆ ಮಸೂದೆಗೆ ಅನುಮೋದನೆ ನೀಡಿದ ಎರಡನೇ ರಾಜ್ಯವಾಗಿದೆ ರಾಜಸ್ಥಾನ. ಈ ಕಾನೂನಿನ ಪ್ರಕಾರ ಗುಂಪು ಹಲ್ಲೆ ಪ್ರಕರಣಗಳು ಸೆಷನ್ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಸಲಿದ್ದು, ಇದು ಜಾಮೀನು ರಹಿತ ಮತ್ತು ಸಂಯುಕ್ತ ಅಪರಾಧವಾಗಿರುವುದಿಲ್ಲ.

ಹೊಸ ಕಾನೂನಿನಲ್ಲಿ ಏನಿರುತ್ತದೆ?
ಗುಂಪು ಹಲ್ಲೆ ಸಂತ್ರಸ್ತೆ/ಸಂತ್ರಸ್ತ ಸಾವಿಗೀಡಾದರೆ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ₹1 ಲಕ್ಷದಿಂದ ₹5 ಲಕ್ಷದ ವರೆಗೆ ದಂಡ ವಿಧಿಸಲಾಗುವುದು.ಒಂದು ವೇಳೆ ಸಂತ್ರಸ್ತ/ಸಂತ್ರಸ್ತೆಗೆ ಗಂಭೀರ ಗಾಯಗಳಾಗಿದ್ದರೆ ಅಪರಾಧಿಗೆ 10 ವರ್ಷ ಜೈಲು ಮತ್ತು ₹25,000- ₹3 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಇನ್ನುಳಿದಂತೆ ಸಂತ್ರಸ್ತರಿಗೆ ಗಾಯಗಳಾಗಿದ್ದರೆ ಅಪರಾಧಿಗೆ 7 ವರ್ಷ ಜೈಲು ಮತ್ತು ₹1 ಲಕ್ಷದವರಗೆ ದಂಡ ವಿಧಿಸಲಾಗುವುದು.

ಆರೋಪಿಯ ಬಂಧನಕ್ಕೆ ತಡೆಯೊಡ್ಡುವುದು, ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸುವುದು ಅಥವಾ ಸಾಕ್ಷಿಗಳಿಗೆ ಬೆದರಿಕೆಯೊಡ್ಡಿದರೆ ಅಪರಾಧಿಗೆ 5 ವರ್ಷ ಜೈಲು ಮತ್ತು ₹1 ಲಕ್ಷ ದಂಡ ವಿಧಿಸಲಾಗುವುದು.

ಗುಂಪು ಹಲ್ಲೆ ಪ್ರಕರಣದಲ್ಲಿ ಸಾಕ್ಷಿದಾರರ ಭದ್ರತೆಗಾಗಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಸುಪ್ರೀಂಕೋರ್ಟ್ ನಿರ್ದೇಶಿಸಿರುವ ಕೋಆರ್ಡಿನೇಟರ್ ಒಬ್ಬರನ್ನು ನಿಯೋಜಿಸಲಾಗುವುದು. ಪೊಲೀಸ್ ಇನ್ಸ್ಪೆಕ್ಟರ್ ಶ್ರೇಣಿಗಿಂತ ಕೆಳಗಿನ ಶ್ರೇಣಿಯ ಯಾವುದೇ ಅಧಿಕಾರಿ ಈ ಪ್ರಕರಣಗಳ ತನಿಖೆ ನಡೆಸುವಂತಿಲ್ಲ.

ಸಂತ್ರಸ್ತರಿಗೆ ರಾಜಸ್ಥಾನ ಸಂತ್ರಸ್ತರ ಪರಿಹಾರ ಯೋಜನೆಯಿಂದ ಪರಿಹಾರ ಧನ ಲಭಿಸಲಿದ್ದು, ಪುನರ್ವಸತಿ ಅಗತ್ಯವಿದ್ದರೆ ಅದನ್ನೂ ಕಲ್ಪಿಸಲಾಗುವುದು.

ಬಿಜೆಪಿ ಪ್ರತಿಕ್ರಿಯೆ ಏನು?
ಒಂದು ನಿರ್ದಿಷ್ಟಸಮುದಾಯವನ್ನು ಮೆಚ್ಚಿಸುವುದಕ್ಕಾಗಿ ಸರ್ಕಾರ ಈ ರೀತಿಯ ಕಾನೂನನ್ನು ಜಾರಿಗೆ ತಂದಿರುವುದು ದುರದೃಷ್ಟಕರ ಎಂದು ಬಿಜೆಪಿ ವಕ್ತಾರ ಪಂಕಜ್ ಮೀನಾ ಹೇಳಿದ್ದಾರೆ.

ಇದನ್ನೂ ಓದಿ:ದ್ವೇಷ ಕೃತ್ಯ ಪ್ರಕರಣ ಸಂತ್ರಸ್ತರಲ್ಲಿ ಬಹುಪಾಲು ಅಲ್ಪ ಸಂಖ್ಯಾತರು ಮತ್ತು ದಲಿತರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.