ಜೈಪುರ: ರಾಜಸ್ಥಾನ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜ್ಯದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರು ಅಸ್ಸಾಂ ರಾಜ್ಯಪಾಲ ಗುಲಾಬ್‌ಚಂದ್ ಅವರನ್ನು ಉದಯಪುರದಲ್ಲಿ ಭಾನುವಾರ ಭೇಟಿಯಾಗಿದ್ದರು.

ಇದು ಮೊದಲೇ ನಿರ್ಧಾರವಾಗಿದ್ದ ಭೇಟಿಯಲ್ಲ. ಭೇಟಿ ವೇಳೆ ಇಬ್ಬರೂ ದೀರ್ಘಕಾಲ ಚರ್ಚೆ ನಡೆಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯದ ಮೇವಾಡ್ ಪ್ರದೇಶದ ರಾಜಕೀಯ ದೃಷ್ಟಿಯಿಂದ ಇದು ಮಹತ್ವದ ಸಭೆ ಎಂದು ಪರಿಗಣಿಸಲಾಗಿದೆ. ಕಠಾರಿಯಾ ಅವರು ಉದಯಪುರ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದಿದ್ದರು. ಈಗ ಅವರು ರಾಜ್ಯಪಾಲರಾಗಿರುವ ಕಾರಣ, ಆ ಕ್ಷೇತ್ರದಿಂದ ಪ್ರಭಾವಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.