ನವದೆಹಲಿ: ಭಾರತದ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಅವರನ್ನು ಗುರುವಾರ ನೇಮಕ ಮಾಡಲಾಗಿದೆ.

ಈ ಬಗ್ಗೆಕೇಂದ್ರ ಕಾನೂನು ಸಚಿವ ಕಿರಣ್ರಿಜಿಜು ಅವರು ತಮ್ಮಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಹಾಲಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರ ಅಧಿಕಾರಮೇ 14ರಂದು ಕೊನೆಗೊಳ್ಳಲಿದೆ. ಇವರ ಸ್ಥಾನಕ್ಕೆರಾಜೀವ್ ಕುಮಾರ್ ಅವರನ್ನು ನೇಮಿಸಲಾಗಿದೆ.ಮೇ 15 ರಂದು ರಾಜೀವ್ ಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

‘ಕಾನೂನು ಸಚಿವಾಲಯ ಹೊರಡಿಸಿದ ಮೇ 12ರ ಅಧಿಸೂಚನೆಯ ಪ್ರಕಾರ ಸಂವಿಧಾನದ 324ನೇ ವಿಧಿಯ ಷರತ್ತು (2) ರ ಅನುಸಾರವಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಈ ನೇಮಕಾತಿ ಮಾಡಿದ್ದಾರೆ. ರಾಜೀವ್ ಕುಮಾರ್ ಅವರಿಗೆ ಶುಭಾಶಯಗಳು‘ ಎಂದು ಸಚಿವರು ಟ್ವೀಟ್ನಲ್ಲಿ ಹೇಳಿದ್ದಾರೆ.

ರಾಜೀವ್ ಕುಮಾರ್ ಅವರು ಜಾರ್ಖಂಡ್ ಕೇಡರ್ನ 1984ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರು 2020ರಲ್ಲಿ ಭಾರತ ಚುನಾವಣಾ ಆಯೋಗದ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮುನ್ನ ಅವರು ಸಾರ್ವಜನಿಕ ಉದ್ಯಮಗಳ ಮಂಡಳಿ, ಜಾರ್ಖಂಡ್ ಆಡಳಿತಾತ್ಮಕ ಸೇವೆ, ಕೇಂದ್ರ ಹಣಕಾಸು ಸಚಿವಾಲಯದಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ.

ಓದಿ:ಫ್ಲಾರೆನ್ಸ್ ನೈಟಿಂಗೇಲ್ ನೆನಪು | ಇಂದು ದಾದಿಯರ ದಿನ– ರಘುನಾಥ ಚ.ಹ. ಬರಹ

ರಾಜೀವ್ ಕುಮಾರ್ ಅವರು 1960ರಲ್ಲಿ ಜಾರ್ಖಂಡ್ ರಾಜ್ಯದಲ್ಲಿ ಜನಿಸಿದರು. ಅವರುಬಿಎಸ್ಸಿ, ಎಲ್ಎಲ್ಬಿ ಹಾಗೂ ಪಿಜಿಡಿಎಂ ಪದವಿ ಪಡೆದಿದ್ದಾರೆ.

ಇದನ್ನೂ ಓದಿ–ಡಿಕೆಶಿ ಬೆಂಬಲಿಗರ ವಿರುದ್ಧ ರಮ್ಯಾ ಸಿಡುಕು: ‘ಗುಡ್ ಕಾಪಿ ಪೇಸ್ಟ್ ಜಾಬ್‘ ಎಂದ ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.