ಪುಣೆ: ಜೈಲಿನಲ್ಲಿರುವ ಕೈದಿಗಳಿಗೆ ಹಸುಗಳನ್ನು ಸಾಕುವ ಕೆಲಸ ನೀಡಿದಾಗ ಅವರ ಮನಸ್ಥಿತಿಯಲ್ಲಿ ಬದಲಾವಣೆ ಕಂಡು ಬಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಶನಿವಾರ ಗೋ ವಿಗ್ಯಾನ್ ಸಂಶೋಧನ್ ಸಂಸ್ಥಾ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಭಾಗವತ್ ಹಸುಗಳಈ ರೀತಿಯ ವೈಶಿಷ್ಟ್ಯಗಳನ್ನು ದಾಖಲಿಸಬೇಕಿದೆ ಎಂದಿದ್ದಾರೆ.

ಗೋವು ಜಗತ್ತಿನ ತಾಯಿ. ಇದು ಮಣ್ಣನ್ನು, ಪ್ರಾಣಿ, ಪಕ್ಷಿ ಮತ್ತು ಮನುಷ್ಯರನ್ನು ಪೋಷಿಸುತ್ತದೆ. ಮನುಷ್ಯರನ್ನು ಕಾಯಿಲೆಗಳಿಂದ ರಕ್ಷಿಸಿ ಮನುಷ್ಯನ ಹೃದಯವನ್ನು ಹೂವಿನಂತೆ ಮೃದುಮಾಡುತ್ತದೆ .

ಜೈಲುಗಳಲ್ಲಿ ಗೋಶಾಲೆಗಳನ್ನು ನಿರ್ಮಿಸಿ ಕೈದಿಗಳಿಗೆ ಗೋವುಗಳನ್ನು ಆರೈಕೆ ಮಾಡುವ ಹೊಣೆ ನೀಡಿದಾಗ ಕೈದಿಗಳ ಅಪರಾಧ ಮನಸ್ಥಿತಿ ಕಡಿಮೆಯಾಗಿದೆ. ಜೈಲಿನ ಅಧಿಕಾರಿಗಳು ತಮ್ಮ ಅನುಭವಗಳನ್ನು ನನ್ನ ಜತೆ ಹಂಚಿಕೊಂಡಿದ್ದನ್ನು ನಾನಿಲ್ಲಿ ಹೇಳುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ:ಸ್ವಾರ್ಥ ಕೆಟ್ಟದ್ದು: ಬಿಜೆಪಿ–ಶಿವಸೇನಾ ಸಂಘರ್ಷದ ಬಗ್ಗೆ ಮೋಹನ್ ಭಾಗವತ್

ಗೋವುಗಳ ವೈಶಿಷ್ಟ್ಯವನ್ನು ಜಗತ್ತಿಗೆ ಸಾಬೀತು ಪಡಿಸಬೇಕಾದರೆ ನೀವು ಅದನ್ನು ದಾಖಲಿಸಬೇಕು. ಕೈದಿಗಳ ಮನಸ್ಥಿತಿಮೇಲೆ ಪ್ರಯೋಗ ನಡೆಸಿ, ಹಸುಗಳನ್ನು ಆರೈಕೆಮಾಡಿದ ಮೇಲೆ ಅವರ ಮನಸ್ಥಿತಿಯಲ್ಲಾದ ಪರಿಣಾಮವನ್ನು ದಾಖಲಿಸಬೇಕು. ವಿವಿಧ ಪ್ರದೇಶಗಳಲ್ಲಿ ಈ ರೀತಿಯ ಪ್ರಯೋಗಮಾಡಬೇಕು.

ಈ ಸಂಸ್ಥೆ ಬೀಡಾಡಿ ದನಗಳನ್ನ ತಂದು ಸಾಕುತ್ತಿದ್ದು ಇಲ್ಲಿ ಜಾಗದ ಕೊರತೆ ಇದೆ. ನಮ್ಮ ಜನರು ಒಬ್ಬೊಬ್ಬರು ಒಂದೊಂದು ದನವನ್ನು ಸಾಕಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ. ಸಮಾಜದ ಎಲ್ಲ ವಿಭಾಗದ ಜನರು ಒಗ್ಗೂಡಿ ಹಸುಗಳ ಆರೈಕೆ ಹೊಣೆ ಹೊತ್ತುಕೊಳ್ಳಬೇಕು. ಯಾರೊಬ್ಬರೂ ಕಸಾಯಿಖಾನೆಗೆ ಹಸುಗಳನ್ನು ಕಳುಹಿಸಬಾರದು. ಇದೀಗ ಹಿಂದೂಗಳೇ ಹೆಚ್ಚಾಗಿ ಹಸುಗಳನ್ನು ಕಸಾಯಿಖಾನೆಗೆ ದೂಡುತ್ತಿದ್ದಾರೆ ಎಂದು ಭಾಗವತ್ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.