ತಿರುವನಂತಪುರಂ: ಕೇರಳದಕಾಸರಗೋಡು ಮತ್ತು ಕಣ್ಣೂರು ಲೋಕಸಭಾ ಕ್ಷೇತ್ರಗಳ ನಾಲ್ಕು ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಚುನಾವಣಾ ಆಯೋಗ ಆದೇಶಿಸಿದೆ.ಭಾನುವಾರ ಇಲ್ಲಿ ಮರುಮತದಾನ ನಡೆಯಲಿದೆ.

ಏಪ್ರಿಲ್ 23ರಂದು ಇಲ್ಲಿ ಲೋಕಸಭಾ ಚುನಾವಣೆಯ ಮತದಾನ ನಡೆದಿತ್ತು. ಆದರೆ ಕೆಲವು ಮತಗಟ್ಟೆಗಳಲ್ಲಿ ಬೋಗಸ್ ಮತದಾನ ನಡೆದಿರುವುದು ಗಮನಕ್ಕೆ ಬಂದಿತ್ತು,

ಕಾಸರಗೋಡಿನ ಕಲ್ಯಾಶ್ಶೇರಿ ಬೂತ್ ಸಂಖ್ಯೆ 19 -ಪಿಲಾತ್ತರ ಯುಪಿ ಶಾಲೆ, ಪುತಿಯಂಞಾಡಿ ಜಮಾಅತ್ ಮಸ್ಜೀದ್ ನಾರ್ತ್, ಸೌತ್ ಬ್ಲಾಕ್ನಲ್ಲಿರುವ ಮತಗಟ್ಟೆ, ಕಣ್ಣೂರು ತಳಿಪರಂಬ ಮತಗಟ್ಟೆ ಸಂಖ್ಯೆ 166, ಪಾಂಬುರುತ್ತಿ ಮಾಪ್ಪಿಳ ಯುಪಿ ಸ್ಕೂಲ್- ಈ ಮತಗಟ್ಟೆಗಳಲ್ಲಿ ಮೇ 20ರಂದು ಮರು ಮತದಾನ ನಡೆಯಲಿದೆ.

ರಾಜ್ಯದ ಮುಖ್ಯ ಚುನಾವಣಾಧಿಕಾರಿ ಟೀಕಾರಾಂ ಮೀನಾ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದು,ಶುಕ್ರವಾರ ಸಂಜೆವರೆಗೆ ಚುನಾವಣಾ ಪ್ರಚಾರಕ್ಕೆ ಅನುಮತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.