ಹೈದರಾಬಾದ್: ಸೋಪು ಮತ್ತು ಹಲ್ಲುಜ್ಜುವ ಪೇಸ್ಟ್‌ನಲ್ಲಿ ಬಳಸುವ ಟ್ರೈಕ್ಲೋಸನ್ ಎಂಬ ರಾಸಾಯನಿಕ ವಸ್ತುವು ಮನುಷ್ಯನ ನರಮಂಡಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಹೈದರಾಬಾದ್ ಐಐಟಿಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಸೋಪು, ಪೇಸ್ಟ್ ಮತ್ತು ಡಿ–ಒಡೊರೆಂಟ್‌ಗಳಲ್ಲಿ ಸಸ್ಯಜನ್ಯ ವಸ್ತು- ಗಳನ್ನು ಬಳಸಲಾಗಿರುತ್ತದೆ. ಇಂತಹ ಉತ್ಪನ್ನಗಳನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಿ ಇಟ್ಟಾಗ ಸೂಕ್ಷ್ಮಾಣು ಜೀವಿಗಳು ಬೆಳವಣಿಗೆ ಆಗುವುದನ್ನು ತಡೆಯಲು ತಯಾರಕರು ಕೆಲವು ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ. ಭಾರತವೂ ಸೇರಿದಂತೆ ಜಗತ್ತಿನ ಹಲವೆಡೆ ಈ ಉದ್ದೇಶಕ್ಕಾಗಿ ಟ್ರೈಕ್ಲೋಸನ್ ಎಂಬ ರಾಸಾಯನಿಕ ವಸ್ತುವನ್ನು ಬಳಸಲಾಗುತ್ತದೆ.

ಅತ್ಯಂತ ಕಡಿಮೆ ಪ್ರಮಾಣದ ಟ್ರೈಕ್ಲೋಸನ್ ಬಳಕೆಯಿಂದ ಮನು- ಷ್ಯನ ನರಮಂಡಳದಲ್ಲಿನ ನರ ಜೀವಕೋಶಗಳಿಗೆ ಹಾನಿಯಾಗುತ್ತದೆ. ಹಲವು ಸಂದರ್ಭಗಳಲ್ಲಿ ನರ ಜೀವಕೋಶಗಳು ಸಾಯಲೂ ಕಾರಣವಾಗುತ್ತದೆ. ಇದರಿಂದ ನರಮಂಡಲದಲ್ಲಿ ಸಂದೇಶ ರವಾನೆಗೆ ಅಡಚಣೆಯಾಗುತ್ತದೆ ಎಂದು ಐಐಟಿ ಹೈದರಾಬಾದ್‌ನ ವಿಜ್ಞಾನಿಗಳು ಹೇಳಿದ್ದಾರೆ.

ಐಐಟಿ ಹೈದರಾಬಾದ್‌ನ ಜೈವಿಕ ತಂತ್ರಜ್ಞಾನ ವಿಭಾಗದ ಡಾ.ಅನಾಮಿಕಾ ಭಾರ್ಗವ ಅವರ ನೇತೃತ್ವದಲ್ಲಿ ಈ ಅಧ್ಯಯನ ನಡೆದಿದೆ. ‘ಮನೆಗಳಲ್ಲಿ ಸಾಕುವ ‘ಜೆಬ್ರಾಫಿಶ್’ನ ಮೇಲೆ ಟ್ರೈಕ್ಲೋಸಿನ್‌ನ ಪರಿಣಾಮಗಳನ್ನು ಈ ಅಧ್ಯಯನದಲ್ಲಿ ಪರಿಶೀಲಿಸಲಾಗಿದೆ. ಈ ಮೀನಿನ ಮೇಲೆ ಆಗುವ ಪರಿಣಾಮಗಳನ್ನು ಮನುಷ್ಯನಿಗೆ ಅನ್ವಯಿಸಬಹುದು’ ಎಂದು ಅವರು ತಿಳಿಸಿದ್ದಾರೆ. ಅಧ್ಯಯನದ ವರದಿಯು ಕಿಮೋಸ್ಫೇರ್ ವೈದ್ಯಕೀಯ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

1960ರ ವೇಳೆಯಲ್ಲಿ ವೈದ್ಯಕೀಯ ಉಪಕರಣ ಮತ್ತು ಬಟ್ಟೆಗಳಲ್ಲಿ ಮಾತ್ರ ಟ್ರೈಕ್ಲೋಸನ್ ಬಳಸಲಾಗುತ್ತಿತ್ತು. ಈಗ, ಸೋಪು, ಹಲ್ಲುಜ್ಜುವ ಪೇಸ್ಟ್, ಡಿ–ಒಡೊರೆಂಟ್ ಮತ್ತು ಕೆಲವು ಸ್ವರೂಪದ ಬಟ್ಟೆಗಳಲ್ಲೂ ಟ್ರೈಕ್ಲೋಸನ್ ಅನ್ನು ಬಳಸಲಾಗುತ್ತದೆ. ಇಂತಹ ಉತ್ಪನ್ನಗಳಲ್ಲಿ ಟ್ರೈಕ್ಲೋಸನ್ ಅನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಲು ಅನುಮತಿ ಇದೆ. ಬಳಕೆಗೆ ಅನುಮತಿ ನೀಡಿರುವುದಕ್ಕಿಂತ 500 ಪಟ್ಟು ಕಡಿಮೆ ಪ್ರಮಾಣದಷ್ಟು ಟ್ರೈಕ್ಲೋಸನ್ ಅನ್ನು ಬಳಸುವುದರಿಂದಲೂ ಈ ದುಷ್ಪರಿಣಾಮಗಳು ಉಂಟಾಗುತ್ತವೆ ಎಂದು ಅಧ್ಯಯನ ತಂಡವು ವಿವರಿಸಿದೆ.

ಅತ್ಯಂತ ಕಡಿಮೆ ಪ್ರಮಾಣದಲ್ಲಿ ಟ್ರೈಕ್ಲೋಸನ್ ಬಳಕೆಯನ್ನು ಮನುಷ್ಯನ ದೇಹವು ತಡೆದುಕೊಳ್ಳಬಲ್ಲದು. ಆದರೆ ಅಷ್ಟೇ ಕಡಿಮೆ ಪ್ರಮಾಣದ ಟ್ರೈಕ್ಲೋಸನ್ ಅನ್ನು ಪ್ರತಿದಿನ, ದೀರ್ಘಾವಧಿಯವರೆಗೆ ಬಳಸಿದರೆ ದೇಹವು ತಡೆದುಕೊಳ್ಳುವುದಿಲ್ಲ. ನರಗಳ ಮಧ್ಯೆ ಸಂದೇಶ ರವಾನೆಗೆ ನೆರವಾಗುವ ನ್ಯೂರಾನ್ ಗಳಿಗೆ ಹಾನಿಯಾಗುತ್ತದೆ. ಇದು ಮನುಷ್ಯನ ನರಮಂಡಲದ ಕಾರ್ಯ ನಿರ್ವಹಣೆಯಲ್ಲಿ ಬದಲಾ ವಣೆ ಮತ್ತು ಅಡಚಣೆಗೆ ಕಾರಣವಾಗುತ್ತದೆ. ಇದು ಅಂತಿಮವಾಗಿ ಮಿದುಳಿನ ವಿವಿಧ ಭಾಗಗಳ ಮಧ್ಯೆ ಸಂವಹನವನ್ನು ಸಂಪೂರ್ಣವಾಗಿ ನಾಶಮಾಡುತ್ತದೆ. ಇದೇ ಕಾರಣದಿಂದ ಅಮೆರಿಕದಲ್ಲಿ ಈ ಹಿಂದೆಯೇ ಟ್ರೈಕ್ಲೋಸನ್ ಬಳಕೆ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಅಧ್ಯಯನ ತಂಡವು ಹೇಳಿದೆ.

ಈ ಸ್ವರೂಪದ ಕಾಯಿಲೆಗೆ ವಿಶ್ವದಾದ್ಯಂತ ಪ್ರತಿವರ್ಷ ಲಕ್ಷಾಂತರ ಜನರು ತುತ್ತಾಗುತ್ತಿದ್ದಾರೆ. ರಾಸಾಯನಿಕ ಮತ್ತು ನೈಸರ್ಗಿಕ ವಸ್ತುಗಳ ಸಂಪರ್ಕದಿಂದ ಇಂತಹ ಕಾಯಿಲೆ ಬರುತ್ತದೆ. ಟ್ರೈಕ್ಲೋಸನ್ ಸಹ ಈ ಕಾಯಿಲೆಗೆ ಕಾರಣವಾಗುವ ವಸ್ತುಗಳಲ್ಲಿ ಒಂದಾಗಿರಬಹುದು. ಈ ಬಗ್ಗೆ ಕೂಲಂಕಷ ಅಧ್ಯಯನ ನಡೆಯಬೇಕು ಎಂದು ಅಧ್ಯಯನ ತಂಡವು ಹೇಳಿದೆ.

ನಿರ್ಬಂಧಕ್ಕೆ ಶಿಫಾರಸು
ಟ್ರೈಕ್ಲೋಸನ್ ಬಳಕೆಗೆ ಭಾರತದಲ್ಲಿ ಯಾವುದೇ ನಿರ್ಬಂಧವಿಲ್ಲ. ಹೀಗಾಗಿ ಟ್ರೈಕ್ಲೋಸನ್ ಇರುವ ವಸ್ತುಗಳ ಬಳಕೆಯ ಬಗ್ಗೆ ಎಚ್ಚರವಿರಬೇಕು. ಟ್ರೈಕ್ಲೋಸನ್ ಬಳಕೆಯನ್ನು ನಿಷೇಧಿಸಬೇಕು. ಇಲ್ಲವೇ ಕನಿಷ್ಠ ನಿರ್ಬಂಧವನ್ನಾದರೂ ಹೇರಬೇಕು ಎಂದು ಅಧ್ಯಯನ ತಂಡವು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.