ರಾಯಪುರ: ಜಾರ್ಖಂಡ್ನ ಆಡಳಿತಾರೂಢ ಯುಪಿಎ ಮೈತ್ರಿಕೂಟ ಸರ್ಕಾರವು ತನ್ನ ಶಾಸಕರನ್ನು ಕಾಂಗ್ರೆಸ್ ಆಡಳಿತ ಇರುವ ಛತ್ತೀಸಗಡಕ್ಕೆ ಮಂಗಳವಾರ ರವಾನಿಸಿದೆ. ಆಡಳಿತ ಪಕ್ಷಗಳ ಶಾಸಕರನ್ನು ಬಿಜೆಪಿ ಸೆಳೆಯುವ ಸಾಧ್ಯತೆಯಿದೆ ಎನ್ನಲಾಗಿದ್ದು, ಅವರನ್ನು ರಾಯಪುರದ ಐಷಾರಾಮಿ ರೆಸಾರ್ಟ್ನಲ್ಲಿ ಇರಿಸಲಾಗಿದೆ.

ಜೆಎಂಎಂ, ಕಾಂಗ್ರೆಸ್ ಹಾಗೂ ಆರ್ಜೆಡಿ ಪಕ್ಷಗಳ32 ಶಾಸಕರನ್ನು ಹೊತ್ತ ವಿಶೇಷ ವಿಮಾನವು ಸಂಜೆ 5.30ಕ್ಕೆ ರಾಯಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣವನ್ನು ತಲುಪಿತು. ಶಾಸಕರು ಮೂರು ಬಸ್ಗಳಲ್ಲಿ ನವರಾಯಪುರ ಸಮೀಪದ ಮೇಫೇರ್ ಲೇಕ್ ರೆಸಾರ್ಟ್ಗೆ ಬಂದರು ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

ಬಸ್ಗಳಿಗೆ ಬೆಂಗಾವಲು ವಾಹನಗಳು ಭದ್ರತೆ ಒದಗಿಸಿದ್ದವು.ರೆಸಾರ್ಟ್ ಸುತ್ತಮುತ್ತ ಬಿಗಿಭದ್ರತೆ ಒದಗಿಸಲಾಗಿದ್ದು, ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿದೆ.ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಶಾಸಕರನ್ನು ರಾಂಚಿ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟು ವಾಪಸಾದರು.

ಸೊರೇನ್ ಅವರ ಶಾಸಕ ಸ್ಥಾನದ ಅನರ್ಹತೆ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗ ಸಲ್ಲಿಸಿರುವ ವರದಿಯ ಬಗ್ಗೆ ಜಾರ್ಖಂಡ್ ರಾಜ್ಯಪಾಲರು ಈವರೆಗೂ ನಿರ್ಧಾರ ತೆಗೆದುಕೊಂಡಿಲ್ಲ. ಸೊರೇನ್ ಅನರ್ಹತೆಗೆ ಆಯೋಗ ಶಿಫಾರಸು ಮಾಡಿದೆ ಎಂಬ ಊಹಾಪೋಹಗಳಿದ್ದು, ಅದು ದೃಢಪಟ್ಟಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.