ಪತ್ತನಂತಿಟ್ಟ (ಕೇರಳ): ಮಂಡಲಂ-ಮಕರವಿಳಕ್ಕು ಯಾತ್ರೆಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವನ್ನು ತೆರೆಯಲಾಗಿದ್ದು, ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕೇರಳ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಭಕ್ತಾದಿಗಳ ನೂಕುನುಗ್ಗಲು ತಪ್ಪಿಸಲು ಪೊಲೀಸ್ ಪಡೆ ಸಜ್ಜಾಗಿದೆ ಎಂದು ಎಡಿಜಿಪಿ ಎಸ್. ಶ್ರೀಜಿತ್ ತಿಳಿಸಿದ್ದಾರೆ.

ಮಲಯಾಳಂ ಕ್ಯಾಲೆಂಡರ್ ಪ್ರಕಾರ 41 ದಿನಗಳ ಕಾಲ ದೇಗುಲದಲ್ಲಿ ಮಂಡಲ ಪೂಜೆ ಹಾಗೂ ಮಕರವಿಳಕ್ಕು ಯಾತ್ರೆ ನಡೆಯಲಿದೆ. ಶುಕ್ರವಾರ ಸಂಜೆ 4 ಗಂಟೆಗೆ ದೇವಸ್ಥಾನದ ಅರ್ಚಕರಾದ ಕಂದರಾರು ರಾಜೀವ್ ಮತ್ತು ಕಂದರಾರು ಬ್ರಹ್ಮದತ್ತನ ಸಮ್ಮುಖದಲ್ಲಿ ಪ್ರಧಾನ ಅರ್ಚಕರಾದ ಪಿ.ಎನ್.ಮಹೇಶ್ ನಂಬೂತಿರಿ ಅವರು ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ತೆರೆದಿದ್ದಾರೆ.

ದೇಗುಲವನ್ನು ತೆರೆಯುವ ಮೊದಲೇ, ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಇಂದು(ಶನಿವಾರ) ಬೆಳಗಿನ ವೇಳೆಗೆ 30,000 ಭಕ್ತರು ದರ್ಶನ ಪಡೆದಿದ್ದಾರೆ ಎಂದು ಎಡಿಜಿಪಿ ಶ್ರೀಜಿತ್ ತಿಳಿಸಿದ್ದಾರೆ.

ಪ್ರತಿದಿನ 80 ಸಾವಿರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. 70 ಸಾವಿರ ವರ್ಚುಯಲ್ ಕ್ಯೂ ಬುಕಿಂಗ್ ಮತ್ತು 10 ಸಾವಿರ ಸ್ಪಾಟ್ ಬುಕಿಂಗ್ಗೆ ಅವಕಾಶ ಇದೆ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
.ಶಬರಿಮಲೆ ಯಾತ್ರೆ: ಹಾವು ಹಿಡಿಯಲು ತಂಡ ನೇಮಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.