ನವದೆಹಲಿ: ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್ನ (ಎನ್ಡಿಟಿವಿ) ಪ್ರವರ್ತಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ವಿರುದ್ಧ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನೀಡಿದ್ದ ಆದೇಶವನ್ನು ಷೇರುಪೇಟೆ ಮೇಲ್ಮನವಿ ನ್ಯಾಯಮಂಡಳಿಯು (ಎಸ್ಎಟಿ) ಗುರುವಾರ ರದ್ದುಪಡಿಸಿದೆ.

ಷೇರುಪೇಟೆಯಲ್ಲಿ ಕಾನೂನುಬಾಹಿರವಾಗಿ ವಹಿವಾಟು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಡಿಟಿವಿ ಸ್ಥಾಪಕರು ಎರಡು ವರ್ಷಗಳವರೆಗೆ ಸಾಲಪತ್ರ ಮಾರುಕಟ್ಟೆ ಪ್ರವೇಶಿಸುವಂತಿಲ್ಲ ಎಂದು 2020ರ ನವೆಂಬರ್ನಲ್ಲಿ ಸೆಬಿ ಆದೇಶಿಸಿತ್ತು. ಅಕ್ರಮವಾಗಿ ಗಳಿಸಿಕೊಂಡಿರುವ ₹ 16.97 ಕೋಟಿಯನ್ನು ಹಿಂದಿರುಗಿಸುವಂತೆಯೂ ಸೂಚನೆ ನೀಡಿತ್ತು.

ಪ್ರಣಯ್ ಮತ್ತು ರಾಧಿಕಾ ಅವರು ಎನ್ಡಿಟಿವಿಯ ಅನುಸರಣಾ ಅಧಿಕಾರಿಯಿಂದ ವಹಿವಾಟಿಗೂ ಮುನ್ನವೇ ಅನುಮತಿ ಪಡೆದುಕೊಂಡಿದ್ದರು. ಹೀಗಾಗಿ ಎನ್ಡಿಟಿವಿಯ ನೀತಿ ಸಂಹಿತೆ ಮತ್ತು ಷೇರು ಸಂಬಂಧಿತ ಗೋಪ್ಯ ಮಾಹಿತಿಯ ದುರ್ಬಳಕೆ ತಡೆ ನಿಯಮಗಳನ್ನು (ಪಿಐಟಿ) ಅನುಗುಣವಾಗಿ ಈ ಇಬ್ಬರು ವಹಿವಾಟು ನಡೆಸಿದ್ದಾರೆ ಎಂದು ಎಸ್ಎಟಿ ತಿಳಿಸಿದೆ.

ಆದರೆ, ಸಮೂಹದ ಸಿಇಒ ವಿಕ್ರಮಾದಿತ್ಯ ಚಂದ್ರ ಅವರ ವಿರುದ್ಧದ ಸೆಬಿ ಆದೇಶವನ್ನು ಸದ್ಯದ ಮಟ್ಟಿಗೆ ತಡೆ ಹಿಡಿದಿದ್ದು, ಮರುಪರಿಶೀಲನೆ ನಡೆಸುವಂತೆ ಸೆಬಿಗೆ ಸೂಚನೆ ನೀಡಿದೆ.

ಎನ್ಡಿಟಿವಿ ಸುದ್ದಿವಾಹಿನಿಯ ಪ್ರವರ್ತಕ ಕಂಪನಿಯಾಗಿರುವ ಆರ್ಆರ್ಪಿಆರ್ ಹೋಲ್ಡಿಂಗ್ಸ್ ಪ್ರೈ.ಲಿ. ನಿರ್ದೇಶಕ ಸ್ಥಾನಕ್ಕೆ ಪ್ರಣಯ್ ಮತ್ತು ರಾಧಿಕಾ ಅವರು 2022ರ ನವೆಂಬರ್ನಲ್ಲಿ ರಾಜೀನಾಮೆ ನೀಡಿದ್ದಾರೆ.
.ಎನ್ಡಿಟಿವಿ ಸ್ಥಾಪಕರ ಶೇ 27 ಷೇರು ಅದಾನಿ ಸಮೂಹಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.