ನವದೆಹಲಿ: ವರ್ಚುವಲ್ ಮೂಲಕ ನಡೆಯುವ ವಿಚಾರಣೆ ವೇಳೆಯಲ್ಲಿ ಹಲವು ವಕೀಲರ ಮೊಬೈಲ್ ಫೋನ್ ಬಳಕೆಯಿಂದ ಪದೇ ಪದೇ ಅಡಚಣೆಯಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ಪೀಠವೊಂದು ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.

ಇದು ಮುಂದುವರಿದರೆ ಮೊಬೈಲ್ ಫೋನ್ ಮೂಲಕ ವರ್ಚುವಲ್ ಮೂಲಕ ನಡೆಸುವ ವಿಚಾರಣೆಯಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗುವುದು ಎಂದೂ ಎಚ್ಚರಿಕೆ ನೀಡಿದೆ.

ವಕೀಲರ ಮೊಬೈಲ್‌ನ ಧ್ವನಿ ಅಥವಾ ದೃಶ್ಯ ಅಥವಾ ಎರಡೂ ಸಂಬಂಧಿತ ಸಮಸ್ಯೆಗಳಿಂದ ಸೋಮವಾರ ಪಟ್ಟಿ ಮಾಡಲಾದ ಸುಮಾರು 10 ಪ್ರಕರಣಗಳ ವಿಚಾರಣೆ ಮುಂದೂಡಬೇಕಾಯಿತು ಎಂಬ ಅಂಶದ ಬಗ್ಗೆ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರು ಇದ್ದ ಪೀಠ ಅತೃಪ್ತಿ ವ್ಯಕ್ತಪಡಿಸಿತು.

‘ಮೊಬೈಲ್ ಮೂಲಕ ವಿಚಾರಣೆಗೆ ಹಾಜರಾಗುವ ವಕೀಲರು ಪದೇ ಪದೇ ಮೊಬೈಲ್ ಬಳಸುವುದರಿಂದ ಸರಿಯಾಗಿ ಕಾಣಿಸುವುದಿಲ್ಲ. ಇದು ಮುಂದುವರಿದರೆ ಮೊಬೈಲ್ ಬಳಕೆ ನಿಷೇಧಿಸುತ್ತೇವೆ. ವಕೀಲರೇ, ನೀವು ಸುಪ್ರೀಂಕೋರ್ಟ್‌ನಲ್ಲಿ ಹಲವು ವರ್ಷಗಳಿಂದ ವಾದಿಸುತ್ತಿದ್ದೀರಿ. ವಿಚಾರಣೆ ವೇಳೆ ನಿಮಗೆ ಒಂದು ಕಂಪ್ಯೂಟರ್ ಬಳಸಲು ಆಗುವುದಿಲ್ಲವೇ’ ಎಂದು ಪೀಠ ಪ್ರಕರಣವೊಂದರಲ್ಲಿ ಸೂಚಿಸಿದೆ.

ಮತ್ತೊಂದು ಪ್ರಕರಣದ ವರ್ಚುವಲ್ ವಿಚಾರಣೆ ವೇಳೆ ಅಂತರ್ಜಾಲ ಸಂಪರ್ಕ ಕಡಿತದಿಂದ ಉಂಟಾದ ಅಡಚಣೆಗೆ ಪೀಠ ಬೇಸರ ವ್ಯಕ್ತಪಡಿಸಿತು.

ಕೋವಿಡ್ ಹಿನ್ನೆಲೆ 2020ರ ಮಾರ್ಚ್‌ನಿಂದ ಸುಪ್ರೀಂಕೋರ್ಟ್ ವರ್ಚುವಲ್ ವಿಚಾರಣೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.