ನವದೆಹಲಿ: ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದಂತೆ ಗಡುವು ವಿಸ್ತರಣೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು (ಸೋಮವಾರ) ವಜಾಗೊಳಿಸಿದೆ.

ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದ ವಿವರಗಳನ್ನು ಮಾರ್ಚ್ 12ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಮಾರ್ಚ್ 15ರಂದು ಸಂಜೆ 5 ಗಂಟೆಯೊಳಗೆ ಬ್ಯಾಂಕ್ ಹಂಚಿಕೊಂಡ ವಿವರಗಳನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಚುನಾವಣಾ ಬಾಂಡ್ಗಳು ಅಸಾಂವಿಧಾನಿಕ ಎಂದು ಫೆ. 15ರಂದು ಘೋಷಿಸಿದ್ದ ಸುಪ್ರೀಂ ಕೋರ್ಟ್, ಬಾಂಡ್ನ ಸಮಗ್ರ ವಿವರಗಳನ್ನು ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಜತೆಗೆ ಆಯೋಗದ ಅಂತರ್ಜಾಲತಾಣದಲ್ಲಿ ಪ್ರಕಟಿಸಬೇಕು ಎಂದು ಸೂಚಿಸಿತ್ತು. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ವಿವರಗಳನ್ನು ಕ್ರೋಢೀಕರಿಸುವುದು ಅಸಾಧ್ಯವಾಗಿದ್ದು, ಜೂನ್ 30ರವರೆಗೆ ಕಾಲಾವಕಾಶ ನೀಡಬೇಕು ಎಂದು ಬ್ಯಾಂಕ್ ಕೋರಿತ್ತು.
.ಚುನಾವಣಾ ಬಾಂಡ್: ಎಸ್ಬಿಐನಿಂದ ‘ಉದ್ದೇಶಪೂರ್ವಕ ಅಸಹಕಾರ’- ಸಿಪಿಎಂ.ರಾಷ್ಟ್ರೀಯ ಪಕ್ಷಗಳಿಗೆ ಅನಾಮಧೇಯ ಮೂಲಗಳಿಂದ ದೇಣಿಗೆ; ಚುನಾವಣಾ ಬಾಂಡ್ ಪಾಲು ಶೇ 82!.ವಾಚಕರ ವಾಣಿ | ಚುನಾವಣಾ ಬಾಂಡ್: ಸೈದ್ಧಾಂತಿಕ ವಿಜಯ.ಆಳ-ಅಗಲ | ಚುನಾವಣಾ ಬಾಂಡ್: ಮುಚ್ಚಿಟ್ಟಿದ್ದೇ ಹೆಚ್ಚು.ಸಂಪಾದಕೀಯ: ಚುನಾವಣಾ ಬಾಂಡ್ ಯೋಜನೆ ರದ್ದತಿ; ಸುಪ್ರೀಂ ಕೋರ್ಟ್ ತೀರ್ಪು ಚಾರಿತ್ರಿಕ.ಚುನಾವಣಾ ಬಾಂಡ್ | ಶಂಕಾಸ್ಪದ ವ್ಯವಹಾರ ಮರೆಮಾಚಲು ಎಸ್ಬಿಐ ಯತ್ನ: ಕಾಂಗ್ರೆಸ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.