ಲಖನೌ: ‘ಸೆಂಗೋಲ್’ ಬದಲಿಸಬೇಕು ಎಂಬ ಆಗ್ರಹದ ಜೊತೆಗೆ, ದುರ್ಬಲ ಮತ್ತು ನಿರ್ಲಕ್ಷಿತ ವರ್ಗಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಲೋಕಸಭೆಯಲ್ಲಿ ಸಮಾಜವಾದಿ ಪಕ್ಷ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂದು ಮಾಯಾವತಿ ಆಗ್ರಹಪಡಿಸಿದ್ದಾರೆ.

ಬಿಎಸ್ಪಿ ಅಧ್ಯಕ್ಷೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆದ ಮಾಯಾವತಿ ಅವರು, ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ಸದಸ್ಯ ಆರ್.ಕೆ.ಚೌಧರಿ ಅವರ ಆಗ್ರಹ ಉಲ್ಲೇಖಿಸಿ ಈ ಮಾತು ಹೇಳಿದರು.

ಲೋಕಸಭೆ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದ ಚೌಧರಿ, ‘ಸೆಂಗೋಲ್’ ಬದಲಿಗೆ ಸಂವಿಧಾನದ ಪ್ರತಿಯನ್ನು ಲೋಕಸಭೆಯಲ್ಲಿ ಇಡಬೇಕು ಎಂದು ಆಗ್ರಹಪಡಿಸಿದ್ದರು.

‘ಎಕ್ಸ್’ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಮಾಯಾವತಿ ಅವರು, ‘ಸೆಂಗೋಲ್ ವಿಷಯದ ಜೊತೆಗೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಸಮಾಜವಾದಿ ಪಕ್ಷ ಲೋಕಸಭೆಯಲ್ಲಿ ಪ್ರಸ್ತಾಪಿಸಲಿ. ಆದರೆ, ವಸ್ತುಸ್ಥಿತಿ ಏನೆಂದರೆ ದುರ್ಬಲ ವರ್ಗದವರಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಆ ಪಕ್ಷ ಮೌನವಾಗಿಯೆ ಇರಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.