ಇಡುಕ್ಕಿ: ಹಿರಿಯ ಸಿಪಿಐ ಮುಖಂಡ, ಟ್ರೇಡ್ ಯೂನಿಯನ್ ಸದಸ್ಯ ಮತ್ತು ಕೇರಳದ ವಿಧಾನಸಭೆಯ ಮಾಜಿ ಡೆಪ್ಯುಟಿ ಸ್ಪೀಕರ್ ಸಿ.ಎ. ಕುರಿಯನ್ (88) ಅವರು ವಯೋಸಹಜ ಅನಾರೋಗ್ಯದಿಂದಾಗಿ ಮುನ್ನಾರ್ನ ತಮ್ಮ ನಿವಾಸದಲ್ಲಿ ಶನಿವಾರ ನಿಧನರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಿಪಿಐನ ಟ್ರೇಡ್ ಯೂನಿಯನ್ ವಿಭಾಗದ ಎಐಟಿಯುಸಿ ಸಂಘಟನೆಯ ಹಿರಿಯ ಮುಖಂಡರಾದ ಕುರಿಯನ್ ಅವರು, ಪೀರ್ಮೇಡ್ ಕ್ಷೇತ್ರದಿಂದ1977, 1980 ಮತ್ತು 1996ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಕೋಟಯಂ ಜಿಲ್ಲೆಯ ಪುದುಪಳ್ಳಿಯವರಾದ ಕುರಿಯನ್ ಅವರು, ಬ್ಯಾಂಕ್ ಉದ್ಯೋಗವನ್ನು ತ್ಯಜಿಸಿ, ರಾಜಕೀಯ ಪ್ರವೇಶಿಸಿದ್ದರು. 1960 ರಲ್ಲಿ ಟ್ರೇಡ್ ಯೂನಿಯನ್ ಕಾರ್ಯಕರ್ತರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಕುರಿಯನ್ ಅವರು ಕೃಷಿ ಕಾರ್ಮಿಕರ ಹೋರಾಟದಲ್ಲಿ, ಹಲವು ತಿಂಗಳು ಜೈಲುವಾಸ ಅನುಭವಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.