ಬೀಜಿಂಗ್: ಚೀನಾದ ಕೇಂದ್ರ ಭಾಗದಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆ ಹಾಗೂ ಭೂಕುಸಿತ, ಪ್ರವಾಹ ಸಂಬಂಧಿತ ಅವಘಡಗಳಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ರೈಲು ಬೋಗಿಗಳು ಜಲಾವೃತಗೊಂಡಿವೆ.

ಹೆನಾನ್ ಪ್ರಾಂತ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಹಲವು ನದಿಗಳು ಉಕ್ಕಿಹರಿದಿವೆ. ‘ಪರಿಸ್ಥಿತಿ ಗಂಭೀರವಾಗಿದೆ’ ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್ ಘೋಷಿಸಿದ್ದು, ಪ್ರವಾಹ ಸ್ಥಿತಿ ನಿಯಂತ್ರಣವು ಚಿಂತಾಜನಕ ಸ್ಥಿತಿಯನ್ನು ತಲುಪಿದೆ ಎಂದಿದ್ದಾರೆ.

ತಗ್ಗುಪ್ರದೇಶ ಮತ್ತು ಸಂಕಷ್ಟದಲ್ಲಿದ್ದ ಸುಮಾರು 2 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಕ್ಕೆ ಸೇನೆ ನಿಯೋಜಿಸಲಾಗಿದೆ. 60 ವರ್ಷದ ಇತಿಹಾಸದಲ್ಲಿಯೇ ಇದು ದಾಖಲೆ ಮಳೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಜೆಂಗ್‌ಜೌ ಮೆಟ್ರೊ ಮುಳುಗಡೆಯಾಗಿದ್ದು, 12 ಜನರು ಮೃತಪಟ್ಟಿದ್ದು, ಇತರೆ ಐದವರು ಗಾಯಗೊಂಡಿದ್ದಾರೆ. ರೈಲ್ವೆ ಸುರಂಗ ಮಾರ್ಗದಲ್ಲಿ ಸಿಲುಕಿಕೊಂಡಿದ್ದ ನೂರಾರು ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ಗೊಂಗೈ ನಗರದಲ್ಲಿ ಮನೆ, ಗೋಡೆಗಳು ಕುಸಿದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಉಳಿದಂತೆ ನಗರದಲ್ಲಿ ಮಳೆಯಿಂದಾಗಿ ಹಲವೆಡೆ ಭೂಕುಸಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.