ನವದೆಹಲಿ: ಜೂನ್ 7ರಂದು ಲಾಂಚ್ ಆದ ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ನಲ್ಲಿ ತಾಂತ್ರಿಕ ತೊಂದರೆಗಳ ಬಗ್ಗೆ ಹಲವು ಬಳಕೆದಾರರು ಟ್ವಿಟರ್ ಮೂಲಕ ಸಾಲು ಸಾಲು ದೂರು ದಾಖಲಿಸಿದ ಬಳಿಕ ಪೋರ್ಟಲ್ ಅಭಿವೃದ್ಧಿಪಡಿಸಿರುವ ಇನ್ಫೋಸಿಸ್ ಮಂಗಳವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕೆಂಗಣ್ಣಿಗೆ ಗುರಿಯಾಗಿದೆ.

ಸೀತಾರಾಮನ್ ಅವರ ಟ್ವಿಟರ್ ಖಾತೆಯ ಟೈಮ್ಲೈನ್, ಪ್ರತಿಕ್ರಿಯಿಸದ ಸರ್ವರ್ಗಳು ಮತ್ತು ಸ್ನ್ಯಾಗ್ಗಳ ದೂರುಗಳಿಂದ ತುಂಬಿದ ನಂತರ ಬಳಕೆದಾರರ ‘ಕುಂದುಕೊರತೆ ಮತ್ತು ತೊಂದರೆಗಳಿಗೆ’ ಕಂಪನಿಯಿಂದ ಪರಿಹಾರವನ್ನು ಕೋರಿ ಇನ್ಫೋಸಿಸ್ ಸಂಸ್ಥೆ ಮತ್ತು ಅದರ ಅಧ್ಯಕ್ಷ ನಂದನ್ ನಿಲೇಕಣಿ ಇಬ್ಬರಿಗೂ ಟ್ಯಾಗ್ ಮಾಡಿ ಟ್ವೀಟ್ ಹಾಕಿದ್ದಾರೆ.

‘ಬಹುನಿರೀಕ್ಷಿತ ಇ-ಫೈಲಿಂಗ್ ಪೋರ್ಟಲ್ 2.0 ಅನ್ನು ಕಳೆದ ರಾತ್ರಿ 20:45ಕ್ಕೆ ಪ್ರಾರಂಭಿಸಲಾಯಿತು. ನನ್ನ ಟೈಮ್ ಲೈನ್ನಲ್ಲಿ ವೆಬ್ ಪೋರ್ಟಲ್ ಬಗೆಗಿನ ಕುಂದು ಕೊರತೆ ಮತ್ತು ತೊಂದರೆಗಳ ದೂರುಗಳನ್ನು ನಾನು ನೋಡುತ್ತಿದ್ದೇನೆ. ಸೇವೆಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ನಮ್ಮ ತೆರಿಗೆದಾರರನ್ನು ಇನ್ಫೋಸಿಸ್ ಮತ್ತು ನಂದನ್ ನಿಲೇಕಣಿ ನಿರಾಸೆಗೊಳಿಸುವುದಿಲ್ಲ ಎಂದು ಭಾವಿಸುತ್ತೇವೆ. ತೆರಿಗೆ ಪಾವತಿದಾರರಿಗೆ ಸುಗಮ ಸೇವೆ ಒದಗಿಸುವುದು ನಮ್ಮ ಆದ್ಯತೆಯಾಗಿರಬೇಕು’ಎಂದು ಹಣಕಾಸು ಸಚಿವರು ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಕಂಪನಿಯನ್ನು ಸಮರ್ಥಿಸಿಕೊಂಡಿರುವ ಇನ್ಫೋಸಿಸ್ನ ಮಾಜಿ ಕಾರ್ಯನಿರ್ವಾಹಕ, ಮೋಹನ್ ದಾಸ್ ಪೈ, ಹೊಸ ಪೋರ್ಟಲ್ ನೆಲೆಗೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ‘ಈ ರೀತಿಯ ಪ್ರತಿಯೊಂದು ದೊಡ್ಡ ವ್ಯವಸ್ಥೆಯು ಸಮಸ್ಯೆಗಳನ್ನು ಹೊಂದಿರುತ್ತದೆ! ಹೆಚ್ಚಿನವು ಬಳಕೆದಾರರ ಕಡೆ ಇರುತ್ತವೆ, ಬಳಕೆದಾರರ ಶಿಕ್ಷಣ, ಡೇಟಾ ಇನ್ಪುಟ್, ಡೇಟಾ ಪಾಪ್ಯುಲೇಶನ್, ವಿನ್ಯಾಸದ ಕುರಿತ ಟೀಕೆಗಳು ಇತ್ಯಾದಿಗಳು ನೆಲೆಗೊಳ್ಳಲು ಸಮಯ ತೆಗೆದುಕೊಳ್ಳುತ್ತದೆ!’ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.