ನವದೆಹಲಿ: ವಸಹಾತುಶಾಹಿ ಕಾಲದ ‘ದೇಶದ್ರೋಹ’ ಕಾನೂನು ರದ್ದತಿಗೆ ಆಗ್ರಹ ಕೇಳಿಬರುತ್ತಿರುವ ನಡುವೆಯೇ, ‘ಭಾರತದ ಸುರಕ್ಷತೆ ಮತ್ತು ಸಮಗ್ರತೆಗೆ ಈ ಕಾನೂನು ಮುಖ್ಯ’ ಎಂದು ಕಾನೂನು ಆರೋಗದ ಮುಖ್ಯಸ್ಥ ನ್ಯಾಯಮೂರ್ತಿ ಋತು ರಾಜ್ ಅವಸ್ಥಿ ಮಂಗಳವಾರ ಹೇಳಿದ್ದಾರೆ.

ಕಳೆದ ವರ್ಷ ಮೇ ನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಂತೆ ಸದ್ಯ ಕಾನೂನನ್ನು ತಡೆಹಿಡಿಯಲಾಗಿದೆ. ಈ ಮಧ್ಯೆ ಕಾನೂನನ್ನು ಉಳಿಸಿಕೊಳ್ಳುವ ಸಮಿತಿಯ ಶಿಫಾರಸನ್ನು ಅವಸ್ಥಿ ಸಮರ್ಥಿಸಿಕೊಂಡಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು, ‘ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಗಳು ಪ್ರತ್ಯೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತವೆ. ಇವು ದೇಶದ್ರೋಹಕ್ಕೆ ಸಂಬಂಧಿಸಿದ ಅಪರಾಧಗಳೆಡೆಗೆ ಗಮನ ನೀಡುವುದಿಲ್ಲ. ಹೀಗಾಗಿ ದೇಶದ್ರೋಹಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾನೂನಿನ ಅಗತ್ಯವಿದೆ’ ಎಂದು ಹೇಳಿದ್ದಾರೆ.

‘ಕಾಶ್ಮೀರದಿಂದ ಕೇರಳದ ವರೆಗೆ ಮತ್ತು ಪಂಜಾಬ್‌ನಿಂದ ಈಶಾನ್ಯದವರೆಗೆ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೇಶದ ಏಕತೆ ಮತ್ತು ಸಾರ್ವಭೌಮತೆ ಕಾಯ್ದುಕೊಳ್ಳಲು ಈ ಕಾನೂನು ಅಗತ್ಯವಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.