ನವೆದಹಲಿ:ದೆಹಲಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಆಗಮಿಸಿದ್ದು, 'ದೀದಿ, ಮನ ಬಿಚ್ಚಿ ನಕ್ಕು ಬಿಡಿ ನೀವು ಪ್ರಜಾಪ್ರಭುತ್ವದಲ್ಲಿದ್ದೀರಿ'ಎಂಬ ಪೋಸ್ಟರ್ ಮೂಲಕಯೂತ್ ಫಾರ್ ಡೆಮಾಕ್ರಸಿ ಎಂಬ ಸಂಘಟನೆಮಮತಾ ಅವರಿಗೆ ಸ್ವಾಗತ ಕೋರಿದೆ.

ಬುಧವಾರ ವಿಪಕ್ಷಗಳು ನಡೆಸುವ ರ್ಯಾಲಿಯಲ್ಲಿ ಭಾಗವಹಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ದೆಹಲಿ ತಲುಪಿದ್ದರು.ಮಮತಾ ಸ್ವಾಗತ ಕೋರಿ ಹಲವಾರು ಪೋಸ್ಟರ್ಗಳು ದೆಹಲಿಯಲ್ಲಿ ಕಾಣಿಸಿಕೊಂಡಿದ್ದು, ದೀದಿ, ಮನ ಬಿಚ್ಚಿ ನಕ್ಕು ಬಿಡಿ ನೀವು ಪ್ರಜಾಪ್ರಭುತ್ವದಲ್ಲಿದ್ದೀರಿ ಎಂಬ ಪೋಸ್ಟರ್ ಹೆಚ್ಚು ಗಮನ ಸೆಳೆದಿದೆ.

ಮಧ್ಯ ದೆಹಲಿಯ ಜಂತರ್ ಮಂತರ್ ರಸ್ತೆ, ಬಂಗಾ ಭವನ್ ಮತ್ತು ವಿಂಡ್ಸರ್ ಪ್ಯಾಲೇಸ್ ಸರ್ಕಲ್ ಪ್ರದೇಶದಲ್ಲಿಈ ರೀತಿಯ ಹೋರ್ಡಿಂಗ್ ಸ್ಥಾಪಿಸಲಾಗಿದೆ.

ಕೊಲ್ಕತ್ತಾದಲ್ಲಿ ರ್ಯಾಲಿ ನಡೆಸಿ ವಿಪಕ್ಷಗಳು ಶಕ್ತಿ ಪ್ರದರ್ಶನ ನಡೆಸಿದ ನಂತರ ಇದೀಗ ಆಮ್ ಆದ್ಮಿ ಪಕ್ಷ ತನಾಶಾಹೀ ಹಟಾವೋ, ಲೋಕ ತಂತ್ರ ಬಚಾವೋ (ಸರ್ವಾಧಿಕಾರ ತೊಲಗಿಸಿ, ಪ್ರಜಾಪ್ರಭುತ್ವ ಉಳಿಸಿ) ಎಂಬ ರ್ಯಾಲಿ ಆಯೋಜಿಸಿದೆ.ಈ ರ್ಯಾಲಿಯಲ್ಲಿ ಭಾಗವಹಿಸುವುದಕ್ಕಾಗಿ ಮಮತಾ ದೆಹಲಿಗೆ ಆಗಮಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಹಲವಾರು ಬಿಜೆಪಿ ನಾಯಕರಿಗೆ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿದ್ದರು ಮಮತಾ.ಇದಕ್ಕೆ ಟಾಂಗ್ ನೀಡಿ, ದೀದಿ ನಿಮ್ಮನ್ನು ಇಲ್ಲಿ ಯಾರೂ ತಡೆಯುವುದಿಲ್ಲ ಎಂಬ ಹೋರ್ಡಿಂಗ್ ಕೂಡಾ ಕಾಣಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.