ತ್ರಿಶ್ಶೂರ್: ಕೇರಳದ ತ್ರಿಶ್ಶೂರ್ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಸುರೇಶ್ ಗೋಪಿ ಮತದಾನ ಮಾಡಿಲ್ಲ.ಏಪ್ರಿಲ್ 23ರಂದು ಕೇರಳದಲ್ಲಿ ಮತದಾನ ನಡೆದಿದ್ದು, ತಿರುವನಂತಪುರಂ ಶಾಸ್ತಮಂಗಲಂ ರಾಜಕೇಶವದಾಸ್ ಎನ್ಪಿಎಸ್ ಹೈಸ್ಕೂಲ್ನಲ್ಲಿರುವ ಮತಗಟ್ಟೆಯಲ್ಲಿ ಸುರೇಶ್ ಗೋಪಿ ಮತದಾನ ಮಾಡಬೇಕಾದಿತ್ತು.

ಆದರೆ ತ್ರಿಶ್ಶೂರಿನಿಂದ ಬೆಳಗ್ಗೆ ತಿರುವನಂತಪುರಂಗೆ ಹೆಲಿಕಾಪ್ಟರ್ ಮೂಲಕ ಹೋಗಿ ಅಲ್ಲಿ ಮತ ಚಲಾವಣೆ ಮಾಡಿದ ನಂತರ ತ್ರಿಶ್ಶೂರಿಗೆ ಮರಳಿ ಬರುವುದಾಗಿ ಬಿಜೆಪಿ ಜಿಲ್ಲಾ ಘಟಕ ಹೇಳಿತ್ತು. ಆದರೆ ಹೆಲಿಕಾಪ್ಟರ್ ಸಿಗಲಿಲ್ಲಎಂದು ಬಿಜೆಪಿ ನೇತಾರರು ತಿಳಿಸಿದರ. ಆನಂತರಅಲ್ಲಿನ ಪ್ರಮುಖ ಉದ್ಯಮಿಗಳ ಹೆಲಿಕಾಪ್ಟರ್ ಕೇಳಿದರೂಅದು ಸಾಧ್ಯವಾಗಲಿಲ್ಲ.

ಕೊನೆಗೆ ಹೆಲಿಕಾಪ್ಟರ್ ಸಿಗದೇ ಇದ್ದ ಕಾರಣ ಸುರೇಶ್ ಗೋಪಿ ತ್ರಿಶ್ಶೂರಿನಿಂದ ತಿರುವನಂತಪುರಂಗೆ ಹೋಗಿ ಮತ ಚಲಾವಣೆ ಮಾಡುವ ತೀರ್ಮಾನವನ್ನು ಕೈ ಬಿಡಬೇಕಾಗಿ ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.