ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಣ ದುರುಪಯೋಗ ಪ್ರಕರಣ: ಕೇಂದ್ರ ಕಾರಾಗೃಹಕ್ಕೆ ತಲುಪಿದ ಚಂದ್ರಬಾಬು ನಾಯ್ಡು

Published : 11 ಸೆಪ್ಟೆಂಬರ್ 2023, 2:17 IST
Last Updated : 11 ಸೆಪ್ಟೆಂಬರ್ 2023, 2:17 IST
ಫಾಲೋ ಮಾಡಿ
Comments

ಹೈದರಾಬಾದ್‌: ಹಣ ದುರುಪಯೋಗ ಪ್ರಕರಣದಲ್ಲಿ ನ್ಯಾಯಂಗ ಬಂಧನಕ್ಕೆ ಒಳಗಾಗಿರುವ ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಅವರು ಸೋಮವಾರ ಮುಂಜಾನೆ ರಾಜಮಹೇಂದ್ರವರಂನಲ್ಲಿರುವ ಕೇಂದ್ರ ಕಾರಾಗೃಹಕ್ಕೆ ತಲುಪಿದ್ದಾರೆ.

ಕೌಶಲ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಆರೋಪದ ಮೇಲೆ ಚಂದ್ರಬಾಬು ಅವರನ್ನು ಸಿಐಡಿ ಪೊಲೀಸರು ಶನಿವಾರ ನಂದ್ಯಾಲದಲ್ಲಿ ಬಂಧಿಸಿದ್ದರು.

ಚಂದ್ರಬಾಬು ನಾಯ್ಡು ವಿರುದ್ದ ಹೊರಿಸಲಾದ ಆರೋಪಗಳನ್ನು ಪರಿಶೀಲನೆ ನಡೆಸಿದ ನ್ಯಾಯಾಧೀಶರು, ತನಿಖೆಗೆ 24 ಗಂಟೆ ಸಾಲುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬಂದರು. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಅವರು, ಬಂಧನದ ವೇಳೆ ನಾಯ್ಡು ಅವರಿಗೆ ಪ್ರತ್ಯೇಕ ಕೊಠಡಿ, ಮನೆ ಆಹಾರ ಮತ್ತು ಔಷಧಿ ನೀಡುವಂತೆ ಸೂಚಿಸಿದ್ದಾರೆ.

ಚಂದ್ರಬಾಬು ಅವರ ಜೊತೆ ಕೇಂದ್ರ ಕಾರಾಗೃಹಕ್ಕೆ ಅವರ ಮಗ, ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್‌ ತೆರಳಿದ್ದು, ಜೈಲಿನ ಗೇಟಿನವರೆಗೂ ತಂದೆಯ ಬಳಿಯೇ ನಿಂತಿದ್ದರು. ಚಂದ್ರಬಾಬು ಅವರು ಜೈಲಿನೊಳಗೆ ತೆರಳಿದ ಮೇಲೂ ಲೋಕೇಶ್‌ ಅವರು ಸ್ವಲ್ಪ ಕಾಲ ಅಲ್ಲೇ ನಿಂತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಸರ್ಕಾರಿ ನಿವೃತ್ತ ನೌಕರರಾದ ಜಿ. ಸುಬ್ಬರಾವ್‌ ಹಾಗೂ ಕೆ. ಲಕ್ಷ್ಮಿನಾರಾಯಣ ಈ ಪ್ರಕರಣದಲ್ಲಿ ಕ್ರಮವಾಗಿ ಮೊದಲ ಹಾಗೂ ಎರಡನೇ ಆರೋಪಿಯಾಗಿದ್ದಾರೆ.ಚಂದ್ರಬಾಬು ಅವರು 37ನೇ ಆರೋಪಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT