ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ: ಅಮೀಬಾ ಸೋಂಕಿನಿಂದ ಬಾಲಕ ಸಾವು

Published : 4 ಜುಲೈ 2024, 14:14 IST
Last Updated : 4 ಜುಲೈ 2024, 14:14 IST
ಫಾಲೋ ಮಾಡಿ
Comments

ತಿರುವನಂತಪುರ: ಅಮೀಬಾ ಸೋಂಕಿಗೆ (ಅಮೀಬಿಕ್‌ ಮೆನಿಂಗೊ ಎನ್ಸೆಫಾಲಿಟಿಸ್‌) ಕೋಯಿಕ್ಕೋಡ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ವರ್ಷದ ಬಾಲಕನೊಬ್ಬ ಬುಧವಾರ ಮೃತಪಟ್ಟಿದ್ದಾನೆ.

ಕೋಯಿಕ್ಕೋಡ್‌ ಜಿಲ್ಲೆಯ ರಾಮನಾಟ್ಟುಕರ ನಿವಾಸಿ ಮೃದುಲ್‌ ಇ.ಪಿ. ಮೃತ ಬಾಲಕ. ಕೊಳವೊಂದರಲ್ಲಿ ಈಜಾಡಿದ್ದರಿಂದ ಮೃದುಲ್‌ಗೆ ಸೋಂಕು ತಗುಲಿತ್ತು ಎಂದು ಶಂಕಿಸಲಾಗಿದೆ.

ಇದರೊಂದಿಗೆ, ಈ ಅಪರೂಪದ ಸೋಂಕಿನಿಂದಾಗಿ ಕಳೆದ ಎರಡು ತಿಂಗಳಲ್ಲಿ ವರದಿಯಾದ ಮೂರನೇ ಸಾವು ಇದಾಗಿದೆ.

ಅಮೀಬಿಕ್‌ ಮೆನಿಂಗೊ ಎನ್ಸೆಫಾಲಿಟಿಸ್‌ ಅನ್ನು ‘ಮಿದುಳು ತಿನ್ನುವ ಅಮೀಬಾ’ ಎಂದೂ ಕರೆಯಲಾಗುತ್ತದೆ. ಕಲುಷಿತ ನೀರಿನ ಮೂಲಕ ಈ ಸೋಂಕು ಹರಡುತ್ತದೆ.

ಕಳೆದ ತಿಂಗಳು ಕಣ್ಣೂರಿನಲ್ಲಿ 13 ವರ್ಷದ ಬಾಲಕಿ ಮೃತಪಟ್ಟಿದ್ದಳು. ಮಲಪ್ಪುರಂನಲ್ಲಿ 5 ವರ್ಷದ ಮಗು ಮೇನಲ್ಲಿ ಮೃತಪಟ್ಟಿತ್ತು. 

ಈ ಸೋಂಕಿನಿಂದಾಗಿ ಮೂರು ಸಾವುಗಳು ಸಂಭವಿಸಿದ ಬೆನ್ನಲ್ಲೇ, ಆರೋಗ್ಯ ಇಲಾಖೆಯು ಕೆಲ ಸಲಹೆಗಳನ್ನು ನೀಡಿದೆ. ಕೊಳಗಳು ಹಾಗೂ ನದಿ ನೀರನ್ನು ಬಳಸುವ ವೇಳೆ ಎಚ್ಚರಿಕೆ ವಹಿಸಬೇಕು. ಈಜು ಕೊಳದ ನೀರನ್ನು ಸಮರ್ಪಕವಾಗಿ ಸಂಸ್ಕರಣೆ ಮಾಡಲು ಸಂಬಂಧಪಟ್ಟವರು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT