ನವದೆಹಲಿ: ಸರ್ಕಾರದ ‘ಉದ್ಯೋಗ ಮೇಳ’ದಡಿ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ನಡೆಸಿದ ನೇಮಕಾತಿಯಲ್ಲಿ ಆಯ್ಕೆಯಾಗಿರುವ 71,506 ಮಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನೇಮಕಾತಿ ಪತ್ರಗಳನ್ನು ವರ್ಚುವಲ್ ಮೂಲಕ ವಿತರಿಸಿದರು.

ಉದ್ಯೋಗ ಮೇಳ ಉದ್ದೇಶಿಸಿ ವಿಡಿಯೊ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು, ‘ನವ ಭಾರತವು ಹೊಸ ನೀತಿಗಳು ಮತ್ತು ಕಾರ್ಯತಂತ್ರಗಳೊಂದಿಗೆ ಮುನ್ನಡೆಯುತ್ತಿದೆ. ನಮ್ಮ ಸರ್ಕಾರವು ತಂತ್ರಜ್ಞಾನ ಮತ್ತು ಮೂಲಸೌಕರ್ಯ ವಿಷಯಗಳಲ್ಲಿ ಪ್ರಗತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಹೊಸ ಸಾಧ್ಯತೆಗಳಿಗೆ ಬಾಗಿಲು ತೆರೆದಿದೆ’ ಎಂದರು.

ಸಣ್ಣ ಮತ್ತು ಕಿರು ಉದ್ಯಮಗಳಿಗೆ ನೀಡಲಾಗುತ್ತಿರುವ ಮುದ್ರಾ ಸಾಲ ಯೋಜನೆಯಿಂದ ದೇಶದಲ್ಲಿ ಎಂಟು ಕೋಟಿ ನವ ಉದ್ಯಮಿಗಳನ್ನು ಸೃಷ್ಟಿಸಲಾಗಿದೆ. ಈ ಯೋಜನೆಯಡಿ ₹23 ಲಕ್ಷ ಕೋಟಿ ಸಾಲ ಕೊಡಲಾಗಿದೆ. ‘ಮುದ್ರಾ’ ಫಲಾನುಭವಿಗಳಲ್ಲಿ ಶೇ 70ರಷ್ಟು ಮಹಿಳೆಯರು ಇದ್ದಾರೆ ಎಂದು ಹೇಳಿದರು.

‘ಬೇರುಮಟ್ಟದಲ್ಲಿ ಆರ್ಥಿಕತೆ ಬಲಪಡಿಸಲು ಕಿರು ಬಂಡವಾಳವು ಬಹಳಷ್ಟು ಪಾತ್ರ ವಹಿಸುತ್ತದೆ. ಆದರೆ, ಕೆಲವರು ತಮ್ಮನ್ನು ತಾವೇ ದೊಡ್ಡ ಆರ್ಥಿಕ ತಜ್ಞರೆಂದುಕೊಂಡು, ಈ ವಾಸ್ತವವನ್ನು ಎಂದೂ ಅರ್ಥ ಮಾಡಿಕೊಂಡಿರಲಿಲ್ಲ. ಇಂಥವರು ಎಂದಿಗೂ ಜನಸಾಮನ್ಯರ ಸಾಮರ್ಥ್ಯಗಳನ್ನು ಅರಿಯುವುದೂ ಇಲ್ಲ’ ಎಂದು ಮೋದಿ, ವಿರೋಧ ಪಕ್ಷಗಳ ನಾಯಕರನ್ನು ಟೀಕಿಸಿದರು.

‘2047ರ ಹೊತ್ತಿಗೆ ದೇಶವು ಅಭಿವೃದ್ಧಿ ಹೊಂದಿದ ಭಾರತವಾಗಿ ಹೊರಹೊಮ್ಮುವ ಗುರಿಯತ್ತ ಮುನ್ನಡೆಯುತ್ತಿದೆ. ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಇದು ನಿಮಗೆ ಸಿಕ್ಕಿದ ಅವಕಾಶ’ ಎಂದು ಮೋದಿ ಅವರು, ಉದ್ಯೋಗಾಕಾಂಕ್ಷಿಗಳಿಗೆ ಸಂದೇಶ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.