ಚೆನ್ನೈ: ಏಕ ಭಾಷೆ, ಏಕ ಧರ್ಮ ಮತ್ತು ಏಕ ಸಂಸ್ಕೃತಿಯನ್ನು ಹೇರುವವರು ಭಾರತದ ಏಕತೆಯ ಶತ್ರುಗಳು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮ ಸಂಸ್ಥೆಯೊಂದರ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ತಾವು ಮಾಡಿದ ಭಾಷಣದ ಸಾರವನ್ನು ಸ್ಟಾಲಿನ್ ತಮ್ಮ ಟ್ವಿಟರ್ ಖಾತೆಯಲ್ಲಿ ಶನಿವಾರ ಪೋಸ್ಟ್ ಮಾಡಿದ್ದಾರೆ.

‘ಏಕ ಭಾಷೆ, ಏಕ ಧರ್ಮ ಮತ್ತು ಏಕ ಸಂಸ್ಕೃತಿಯನ್ನು ಹೇರುವವರು ಭಾರತದ ಏಕತೆಯ ಶತ್ರುಗಳು. ಏಕರೂಪತೆಯು ಏಕತೆಯಲ್ಲ. ಏಕರೂಪತೆಯಿಂದ ನೀವು ಎಂದಿಗೂ ಏಕತೆಯನ್ನು ಸಾಧಿಸಲು ಸಾಧ್ಯವಿಲ್ಲ. ಬಲಿಷ್ಠ, ಸ್ವಾಯತ್ತ ರಾಜ್ಯಗಳನ್ನು ಹೊಂದುವುದೇ ಭಾರತ ಅಭಿವೃದ್ಧಿ ಹೊಂದಲು ಇರುವ ಏಕೈಕ ಮಾರ್ಗವಾಗಿದೆ‘ ಎಂದು ಅವರು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ತಮಿಳು ಸೇರಿದಂತೆ ಸಂವಿಧಾನದ 8ನೇ ಪರಿಚ್ಛೇದದಡಿ ಮಾನ್ಯತೆ ನೀಡಲಾಗಿರುವ ಎಲ್ಲ ಭಾಷೆಗಳಿಗೆ ಕೇಂದ್ರದ ಸರ್ಕಾರದ ಅಧಿಕೃತ ಭಾಷೆ ಸ್ಥಾನಮಾನ ಪಡೆಯುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಪ್ರಯತ್ನಿಸಲಿದೆ ಎಂದು ಎಂ.ಕೆ.ಸ್ವಾಲಿನ್ ಹಿಂದೊಮ್ಮೆ ಹೇಳಿದ್ದರು. ಈ ಮೂಲಕ ಅವರು ಭಾರತದ ಬಹುಭಾಷಾ ಸಂಸ್ಕೃತಿಯ ರಕ್ಷಣೆಯನ್ನು ಪ್ರತಿಪಾದಿಸಿದ್ದರು.

ಇವುಗಳನ್ನೂ ಓದಿ

ಸೀಮಿತ ಸಂಪನ್ಮೂಲದ ವಿವೇಚನಯುಕ್ತ ಬಳಕೆಗೆ ದಕ್ಷಿಣ ರಾಜ್ಯಗಳು ಒಟ್ಟಾಗಲಿ: ಸ್ಟಾಲಿನ್

Video: ತಮಿಳುನಾಡಿನಲ್ಲಿ ಬ್ರಾಹ್ಮಣೇತರರಿಗೆ ಅರ್ಚಕ ಹುದ್ದೆ

ಗಾಂಧಿ ವಿಚಾರಧಾರೆಗಳು ಮಾತ್ರ ದೇಶಕ್ಕೆ ಸರಿಯಾದ ದಿಕ್ಕು ತೋರಿಸಲಿವೆ: ಸ್ಟ್ಯಾಲಿನ್

8ನೇ ಪರಿಚ್ಛೇದ ವ್ಯಾಪ್ತಿಯ ಭಾಷೆಗಳಿಗೆ ಅಧಿಕೃತ ಸ್ಥಾನಮಾನಕ್ಕೆ ಯತ್ನ: ಸ್ಟಾಲಿನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.