ಕೋಲ್ಕತ್ತ: ಪಶ್ಚಿಮ ಬಂಗಾಳದ 6 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13 ರಂದು ನಡೆಯಲಿರುವ ಉಪಚುನಾವಣೆಗೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳನ್ನು ಶನಿವಾರ ಪ್ರಕಟಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಗೆದ್ದ ಈ ಆರು ಕ್ಷೇತ್ರಗಳ ಹಾಲಿ ಶಾಸಕರು ರಾಜೀನಾಮೆ ನೀಡಿದ್ದರು. ಹಾಗಾಗಿ ಉಪಚುನಾವಣೆ ಘೋಷಣೆಯಾಗಿದೆ.

ಕೂಚ್ ಬೆಹಾರ್ ಜಿಲ್ಲೆಯ ಸಿತಾಯಿ ಕ್ಷೇತ್ರದಿಂದ ಸಂಗೀತ ರಾಯ್, ಅಲಿಪುರದ್ವಾರ್ ಜಿಲ್ಲೆಯ ಮದಾರಿಹಾಟ್ನಿಂದ ಜಯಪ್ರಕಾಶ್ ಟೊಪ್ಪೊ, ನೈಹಾತಿಯಿಂದ ಸನತ್ ಡೇ, ಉತ್ತರ 24 ಪರಗಣದ ಹರೋವಾದಿಂದ ಎಸ್.ಕೆ ರಬಿಯುಲ್ ಇಸ್ಲಾಂ, ಬಂಕುರಾದ ತಲ್ದಂಗ್ರಾದಿಂದ ಫಲ್ಗುಣಿ ಸಿಂಘಬಾಬು ಮತ್ತು ಪಶ್ಚಿಮ ಮೇದಿನಿಪುರ ಜಿಲ್ಲೆಯ ಮೇದಿನಿಪುರ ಕ್ಷೇತ್ರದಿಂದ ಸುಜೋಯ್ ಹಜ್ರಾ ಅವರನ್ನು ಟಿಎಂಸಿ ಕಣಕ್ಕಿಳಿಸಿದೆ.

2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿಡಿತ ಹೊಂದಿರುವ ಮದಾರಿಹಾಟ್ ಹೊರತುಪಡಿಸಿ ಉಳಿದ ಈ ಐದು ಸ್ಥಾನಗಳನ್ನೂ ಟಿಎಂಸಿ ಗೆದ್ದಿತ್ತು.
.Maharashtra Election: 99 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.