ಚೆನ್ನೈ: ₹34.99 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯವು ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಹರೂನ್ ರಶೀದ್, ಶಿಕ್ಷೆಗೊಳಗಾದ ವ್ಯಕ್ತಿಯಾಗಿದ್ದು, ₹ 6 ಲಕ್ಷ ದಂಡ ಪಾವತಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ. ದಂಡ ಪಾವತಿಸಲು ವಿಫಲವಾದರೆ ಮತ್ತೆರಡು ತಿಂಗಳು ಕಠಿಣ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಫೆಬ್ರವರಿ 12, 2014 ಮತ್ತು ನವೆಂಬರ್ 29, 2014 ರ ನಡುವೆ ವಿವಿಧ ಬ್ಯಾಂಕ್ಗಳಲ್ಲಿ ನಿರ್ವಹಿಸಲಾದ ನಾಲ್ಕು ಚಾಲ್ತಿ ಖಾತೆಗಳ ಮೂಲಕ ಎರಡು ನಕಲಿ ಹೆಸರುಗಳಲ್ಲಿ ₹ 5.41 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದಡಿ ರಶೀದ್ ಅವರನ್ನು ಮಾರ್ಚ್ 21, 2018 ರಂದು ಬಂಧಿಸಲಾಗಿತ್ತು. ಬಳಿಕ, ತನಿಖೆ ತೀವ್ರಗೊಳಿಸಿದ ಸಿಬಿಐ, ಈತ ನಕಲಿ ಖಾತೆಗಳನ್ನು ಬಳಸಿ ₹ 34.99 ಕೋಟಿ ಹಣವನ್ನು ಬೇರೆ ಬೇರೆ ದೇಶಗಳಿಗೆ ವರ್ಗಾವಣೆ ಮಾಡಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಹೇಳಿತ್ತು.

ಈತ, ನಕಲಿ ಗುರುತಿನ ದಾಖಲೆಗಳು ಮತ್ತು ಪ್ರವೇಶದ ಬಿಲ್ಗಳಂತಹ ಆಮದು ದಾಖಲೆಗಳನ್ನು ಬಳಸುತ್ತಿದ್ದನು ಎಂದು ಸಿಬಿಐ ಆರೋಪಿಸಿದೆ.

ತನಿಖೆಯ ಸಮಯದಲ್ಲಿ, ರಶೀದ್ ಅಕ್ರಮ ಹಣ ವರ್ಗಾವಣೆಯ ಸಂಪೂರ್ಣ ಅನಾಮಧೇಯತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಗ್ಯಾಂಗ್ನ ಭಾಗವಾಗಿರುವುದನ್ನು ತನಿಖಾ ಸಂಸ್ಥೆಯು ಪತ್ತೆ ಮಾಡಿದೆ.

ಇದು 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ತಮಿಳುನಾಡಿನಲ್ಲಿ ಸಾಬೀತಾದ ಮೂರನೇ ಅಪರಾಧವಾಗಿದೆ. ದೇಶದಲ್ಲಿ ಶಿಕ್ಷೆ ವಿಧಿಸಲಾದ ಪಿಎಂಎಲ್ಎನ 10 ಪ್ರಕರಣಗಳ ಪೈಕಿ ಮೂರು ಪ್ರಕರಣ ತಮಿಳುನಾಡಿನದ್ದೇ ಆಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.