ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ನಾಂದೇಡ್ ಮತ್ತು ಪರ್ಭಣಿ ಜಿಲ್ಲೆಗಳಲ್ಲಿ ಗುರುವಾರ ಬೆಳಿಗ್ಗೆ ಭೂಮಿ ಕಂಪಿಸಿದೆ.

ಯಾವುದೇ ಸಾವು–ನೋವು, ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಬೆಳಿಗ್ಗೆ 6 ಗಂಟೆ 9 ನಿಮಿಷ ಮತ್ತು 6 ಗಂಟೆ 19 ನಿಮಿಷದ ವೇಳೆಗೆ ರಿಕ್ಟರ್ ಮಾಪಕದಲ್ಲಿ 4.5 ಮತ್ತು 3.6 ತೀವ್ರತೆಯ ಕಂಪನಗಳು ದಾಖಲಾಗಿವೆ. ಹಿಂಗೋಲಿ ಜಿಲ್ಲೆಯ ಕಳಮ್ನೂರಿ ತಾಲ್ಲೂಕಿನ ಜಾಂಬ್ ಗ್ರಾಮದಲ್ಲಿ ಭೂಕಂಪನದ ಕೇಂದ್ರಬಿಂದು ಇತ್ತು ಎಂದು ನಾಂದೇಡ್ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ನಾಂದೇಡ್‌ನ ನಗರದ ಕೆಲವು ಪ್ರದೇಶಗಳಲ್ಲಿ ಮತ್ತು ಜಿಲ್ಲೆಯ ಅರ್ಧಾಪುರ, ಮುದಖೇಡ್, ನಾಯ್‌ಗಾಂವ್, ದೇಗ್ಲೂರ್ ಮತ್ತು ಬಿಳೋಲಿ ತಾಲ್ಲೂಕುಗಳಲ್ಲೂ ಕಂಪನದ ಅನುಭವವಾಗಿದೆ. ಜನರು ಭಯಭೀತರಾಗುವುದು ಬೇಡ ಎಂದು ಜಿಲ್ಲಾಧಿಕಾರಿ ಅಭಿಜೀತ್ ರಾವುತ್ ಮನವಿ ಮಾಡಿದ್ದಾರೆ.

ಮನೆಗಳ ಮೇಲ್ಚಾವಣಿಯಲ್ಲಿ ಸಂಗ್ರಹಿಸಿಟ್ಟಿರುವ ಭಾರದ ವಸ್ತುಗಳನ್ನು ತೆರವುಗೊಳಿಸುವಂತೆ ನಿವಾಸಿಗಳಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.